ರಾಜ್ಯಸುದ್ದಿ

ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ.. ನಿಮ್ಮ ಏರಿಯಾ ಕೂಡಾ ಈ ಲಿಸ್ಟ್ ನಲ್ಲಿ ಇದೆಯಾ ನೋಡಿ..!

ನಿನ್ನೆ ರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಕೆಲವು ಏರಿಯಾಗಳಲ್ಲಿ ಭಾರೀ ಮಳೆಯಾಗಿದ್ದು, ಇಂದು ಸಹ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಜನರು ಒಂದೆಡೆ ಮಳೆಯಿಂದ ಸಮಸ್ಯೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಬೆಸ್ಕಾಂ(BESCOM) ಪವರ್ ಕಟ್ (Power Cut)ಮಾಡಿ ಜನರ ಸಂಕಷ್ಟವನ್ನು ಹೆಚ್ಚು ಮಾಡುತ್ತಿದೆ. ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ ಆಗುತ್ತಿದ್ದು, ಜನರು ಪರದಾಡುತ್ತಿದ್ದರೆ. ಇನ್ನು ಈ ಮಧ್ಯೆ ಸಹ ಕೆಲ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದ್ದು, ಯಾವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ದೇವನಹಳ್ಳಿ ಟೌನ್, ಪ್ರಸನಹಳ್ಳಿ, ಬೂದಿಹಳ್ಳ, ಸೌತೆಗೌಡನಹಳ್ಳಿ, ಬಿನ್ನಮಂಗಲ, ಕಾಮಸಮುದ್ರ, ಡಿಪಿ ಹಳ್ಳಿ ಗೌಡನಪಾಳ್ಯ ಎಫ್ 15 ಬಸ್ ನಿಲ್ದಾಣ ಸೇರಿದಂತೆ  ಕುಮಾರಸ್ವಾಮಿ ಲೇಔಟ್, ಅಂಜನಾಪುರ, ತಲಘಟ್ಟಪುರ, ಹರಿ ಕಾಲೋನಿ, ಇಲಿಯಾಸ್ ನಗರ, ಇಸ್ರೋ ಲೇಔಟ್, ಜನಪ್ರಿಯ ಟೌನ್ ಶಿಪ್, ಮಾಚೋಹಳ್ಳಿ, ಕಾಡುಗೋಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಸಮಸ್ಯೆ ಎದುರಾಗಲಿದೆ.

ಭವಾನಿ ನಗರ, ದೊಡ್ಡಬಿದರಕಲ್ಲು, ಗೋಪಿ ಶಾಲಾ ರಸ್ತೆ, ಮೀನಾಕ್ಷಿನಗರ, ಕಾಮಾಕ್ಷಿಪಾಳ್ಯ, ಪಾಪರೆಡ್ಡಿ ಪಾಳ್ಯ ಹಾಗೂ ನಾಗರಭಾವಿ 2 ನೇ ಹಂತ, ಮಾರಗೊಂಡನಹಳ್ಳಿ, ಅಕ್ಷಯ್ ನಗರ, ಕೆಪಿಸಿ ಲೇಔಟ್, ಕಸವನಹಳ್ಳಿ, ವಡೇರಹಳ್ಳಿ ಸೇರಿದಂತೆ ಕನಕಪುರ ಮುಖ್ಯ ರಸ್ತೆ, ಕಗ್ಗಲೀಪುರ, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯ ರಸ್ತೆ, ಬಿಎಸ್‌ಕೆ 3 ನೇ ರಸ್ತೆ ಹಾಗೂ ಸುತ್ತಮುತ್ತಲಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button