how to avoid baldness in males: ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರಿಗೆ ಕೂದಲು ಉದುರುವಿಕೆ ಸಮಸ್ಯೆ ಇರುತ್ತೆ. ಅನುವಂಶೀಯವಾಗಿ ಇಲ್ಲದಿದ್ದರೂ ಯುವ ಪೀಳಿಗೆ ಬಣ್ಣ ಬಣ್ಣದ ಜಾಹೀರಾತುಗಳಿಗೆ ಮಾರು ಹೋಗಿ ಹಣದ ಜೊತೆ ಕೂದಲು ಸಹ ಕಳೆದುಕೊಳ್ಳುತ್ತಾರೆ. ಕೂದಲು ಉದುರಿದ್ರೂ ಇದೀಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ hair transplant ಮಾಡಿಸಿಕೊಳ್ಳಬೇಕು. ಆದ್ರೆ ಇದಕ್ಕೆ ತಗಲುವ ಮೊತ್ತ ದೊಡ್ಡದು. ಅದಕ್ಕೆ ಇವನ್ನು ಮಾಡಿ ನೋಡಿ
ನಿಮ್ಮ ದಿನನಿತ್ಯ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕೂದಲಿಗೆ ನೀಡಿದ್ರೆ ಬಕ್ಕಾ ಆಗೋದನ್ನು ತಪ್ಪಿಸಬಹುದು. ಕೆಲ ವಿಧಾನಗಳನ್ನು ನಿಮ್ಮ ಜೀವನಶೈಲಿ ಜೊತೆ ಅಭ್ಯಾಸ ಮಾಡಿಕೊಂಡ್ರೆ ಕೂದಲು ಉದುರುವಿಕೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.
1. ಸರಿಯಾದ ಶ್ಯಾಂಪೂ ಬಳಕೆ: Use Right Shampoo ನಿಮ್ಮ ಕೇಶಕ್ಕೆ ಯಾವ ಶ್ಯಾಂಪೂ ಬೆಸ್ಟ್ ಅನ್ನೋದನ್ನು ತಿಳಿದುಕೊಳ್ಳಬೇಕು. ವಿಧ ವಿಧದ ಶ್ಯಾಂಪೂ ಬಳಕೆ ಮಾಡಿದಾಗ ನಿಮಗೆ ಹೇರ್ ಲಾಸ್ ಆಗುತ್ತಿದೆಯಾ? ಇಲ್ಲವಾ? ಅನ್ನೋದು ಗಮನಕ್ಕೆ ಬಂದಿರುತ್ತದೆ. ಕೆಮಿಕಲ್ ನಿಂದ ಕೂಡಿರದ ಶ್ಯಾಂಪೂ ಬಳಕೆ ಮಾಡೋದು ಒಳ್ಳೆಯದು. ಅಂಗಡಿಗೆ ಹೋದಾಗೊಮ್ಮೆ ಶ್ಯಾಂಪೂ ಬದಲಿ ಮಾಡಬಾರದು. ಒಂದು ಶ್ಯಾಂಪೂಗೆ ನೀವು ಅಚಲರಾಗಿರಬೇಕು.