ಸಿನಿಮಾಸುದ್ದಿ

ಅ.10ಕ್ಕೆ ನಡೆಯಲಿದೆ Salaga ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮ..!

ದುನಿಯಾ ವಿಜಯ್ (Duniya Vijay) ಮೊದಲ ಸಲ ನಿರ್ದೇಶಕರ ಕ್ಯಾಪ್​ ತೊಟ್ಟು ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಸಲಗ (Salaga Movie). ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ವೀಕ್ಷಕರಿಗೆ ಬಾಗಿಲು ತೆರೆದ ನಂತರವೇ ತಮ್ಮ ಸಿನಿಮಾ ರಿಲೀಸ್ ಮಾಡೋದು ಅಂತ ನಿರ್ಧರಿಸಿದ್ದ ಚಿತ್ರತಂಡ ಕಡೆಗೂ ಚಿತ್ರದ ರಿಲೀಸ್ ದಿನಾಂಕ ಪ್ರಕಟಿಸಿದೆ. ಹೌದು, ದಸರಾ ಹಬ್ಬದ  (Festival)ಅಂಗವಾಗಿ ಅ.14ರಂದು ತೆರೆಗಪ್ಪಳಿಸುತ್ತಿದೆ ಈ ಸಲಗ.

ಸಿನಿಮಾ ಪ್ರಚಾರ ಕಾರ್ಯ  (Salaga Movie Promotion) ಸಹ ಜೋರಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ತುಂಬಾ ಸಮಯದಿಂದಲೇ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದು, ದುನಿಯಾ ವಿಜಯ್ ಅಭಿಮಾನಿಗಳು ಸಲಗ ಕ್ರೇಜ್​ ಜೋರಾಗಿದೆ. ಆದರೆ ಇನ್ನೂ ಈ ಚಿತ್ರದ ಟ್ರೇಲರ್​ ರಿಲೀಸ್ ಆಗಿಲ್ಲ. 

ಇನ್ನು, ಸಿನಿಮಾ ರಿಲೀಸ್​ಗೆ ನಾಲ್ಕು ದಿನ ಇರುವಾಗ ಚಿತ್ರತಂಡ ಪ್ರೀ-ರಿಲೀಸ್​ ಕಾರ್ಯಕ್ರಮ ಮಾಡಲು ನಿರ್ಧರಿಸಿದೆ. ಹೌದು, ಅಕ್ಟೋಬರ್ 14ರಂದು ಸಿನಿಮಾ ರಿಲೀಸ್ ಆಗುತ್ತಿದ್ದರೆ, ಅಕ್ಟೋಬರ್ 10ರಂದು ಬೆಂಗಳೂರಿನಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ನಗರದ ಖಾಸಗಿ ಹೋಟೆಲ್​ನಲ್ಲಿ ಈ ಕಾರ್ಯಕ್ರಮ ಗ್ರ್ಯಾಂಡ್​ ಆಗಿ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button