ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿ ಹಾಗೂ ನಿಯಮವನ್ನು ಹೊಂದಿರುತ್ತದೆ ಮತ್ತು ಅದನ್ನು ಪಾಲಿಸಿಕೊಂಡು ಬಂದಿರುತ್ತದೆ. ಅದರಂತೆ ಬೇರೆ ಬೇರೆ ದೇಶಗಳ ಚಲನಚಿತ್ರೋದ್ಯಮಗಳು ಕೆಲವೊಂದು ನೀತಿ ನಿಯಮವನ್ನು ಪಾಲಿಸುತ್ತಾ ಬಂದಿದೆ, ಸಿನಿಮಾ ಮಾಡುವ ನಿರ್ದೇಶಕರು ಮತ್ತು ನಿರ್ಮಾಪಕರು ಕೂಡ ಕೆಲವೊಂದು ನಿಯಮವನ್ನು ಅನುಸರಿಸುತ್ತಾ ಬಂದಿದ್ದಾರೆ.
ಅದರಂತೆ ಇರಾನ್ನಲ್ಲೊಂದು ಟಿವಿ ಮಾಧ್ಯಮಕ್ಕೆ ಸಂಬಂಧಿಸಿದಂತೆ ವಿಚಿತ್ರ ನಿಯಮವೊಂದು ಜಾರಿಯಾಗಿದೆ. ಅದನ್ನು ಪಾಲಿಸಿಕೊಂಡು ಸಿನಿಮಾ ಅಥವಾ ಟಿವಿಗೆ ಅನುಗುಣವಾದ ದೃಶ್ಯವನ್ನು ಸೆರೆಹಿಡಿಯಬೇಕು. ಒಂದು ವೇಳೆ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಶಿಕ್ಷೆ ಕಟ್ಟಿಟ್ಟಬುತ್ತಿ.
ಇರಾನ್ ಟಿವಿ ಪ್ರಸಾರ ನಿಯಮಕ್ಕೆ ಸಂಬಂಧಿಸಿದಂತೆ ಹೊಸ ಸೆನ್ಸಾರ್ಶಿಪ್ ನಿಯಮವನ್ನು ಜಾರಿಗೆತಂದಿದೆ. ಹೊಸ ನಿಯಮದ ಪ್ರಕಾರ ಮಹಿಳೆಯರು ಟಿವಿಯಲ್ಲಿ ಪಿಜ್ಜಾ ತಿನ್ನುವುದು ಮತ್ತು ಲೆದರ್ ಗ್ಲೌಸ್ ಧರಿಸುವುದು ನಿಷೇಧಿಸಲಾಗಿದೆ. ಮಾತ್ರವಲ್ಲದೆ, ಪುರುಷರು, ಮಹಿಳೆಯರಿಗೆ ಟೀ ನೀಡುವ ದೃಶ್ಯವನ್ನು ತೋರಿಸದಂತೆ ಎಚ್ಚರಿಕೆ ನೀಡಲಾಗಿದೆ.