ಮಗು ಅಲೆಕ್ಸ್ನ ಎದೆ ಮತ್ತು ಕುತ್ತಿಗೆ ಭಾಗದಲ್ಲಿ 9 ಗಾಯದ ಗುರುತುಗಳು ಪತ್ತೆಯಾಗಿದ್ದು, ಎಲ್ಜೆಬೆತ್ ಬ್ರಾಡ್ಯಾಕ್ಸ್ ಬರ್ಬರವಾಗಿ ಕೊಂದಿದ್ದಾಳೆ ಎಂಬುದು ಗೊತ್ತಾಗಿದೆ. ಅಕ್ಟೋಬರ್ 1 ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಷ್ಟೋ ಮಹಿಳೆಯರು ತಮಗೆ ಮಕ್ಕಳಾಗುದಿಲ್ಲವೆಂದು ಬೇಸರ ಪಟ್ಟುಕೊಂಡು ವೈದ್ಯರ ಬಳಿ ತೆರಳಿ ತಮಾಗಿರುವ ಸಮಸ್ಯೆ ಬಗ್ಗೆ ಹೇಳಿ ಔಷಧಿ ಪಡೆದುಕೊಂಡು ಕೊನೆಗೆ ಹೇಗಾದರು ತಾಯ್ತನವನ್ನು ಪಡೆದು ಆನಂದಿಸುವವಿದ್ದಾರೆ. ಆದರೆ ಇನ್ನು ಕೆಲವರಿಗೆ ತಾಯ್ತನ ಎಂದರೆ ಏನು ಎಂಬುದೇ ಗೊತ್ತಿಲ್ಲ ಅದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಘಟನೆ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.
ಹೆತ್ತ ತಾಯಿ ತನ್ನ ಮಗುವನ್ನು ಸಾಕಿ ಸಲಹುದರ ಜೊತೆಗೆ ಚೆನ್ನಾಗಿ ಓದಿಸಬೇಕೆಂಬ ಕನಸು ಕಾಣುತ್ತಾಳೆ. ಆದರೆ ಇಟಲಿಯಲ್ಲಿ ಒಬ್ಬಳು ಮಹಿಳೆ ತನ್ನ 2 ವರ್ಷದ ಮಗುವನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಅಷ್ಟು ಮಾತ್ರವಲ್ಲ, ಮೃತಹೇದವನ್ನ ಲಿಡ್ಲ್ ಸ್ಟೋರ್ ಚೆಕ್ಔಟ್ ಕೌಂಟರ್ನಲ್ಲಿ ಎಸೆದಿದ್ದಾಳೆ.