Indo-China Conflict: ಚೀನಾದಿಂದ(China) ಭಾರತದ ಗಡಿಯೊಳಗೆ(India Border) ನುಸುಳಲು ಯತ್ನಿಸಿದ ಚೀನೀ ಸೈನಿಕರನ್ನು(China Military) ಅರುಣಾಚಲ ಪ್ರದೇಶದ(Arunachal Pradesh) ತವಾಂಗ್(Tawang)ನಲ್ಲಿ ಭಾರತೀಯ ಸೈನಿಕರು ತಾತ್ಕಾಲಿಕವಾಗಿ ವಶಕ್ಕೆ(Detained) ಪಡೆದಿದ್ದರು. ಅವರಲ್ಲಿ 200 ಮಂದಿ ಟಿಬೆಟ್ನಿಂದ(Tibet) ಭಾರತದ ಕಡೆಗೆ ನುಗ್ಗಿ ಬಂಕ್ಗಳನ್ನು ಹಾನಿ ಮಾಡಲು ಯತ್ನಿಸಿದರು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಹೌದು, ಭಾರತೀಯ ಸೇನೆ ಮತ್ತು ಚೀನೀ ಮಿಲಿಟರಿ ಪಡೆಗಳ ನಡುವೆ ಮತ್ತೊಮ್ಮೆ ಮುಖಾಮುಖಿ ಸಂಘರ್ಷ ನಡೆದಿದೆ. ಕಳೆದ ವಾರ ನಡೆದ ಈ ಸಂಘರ್ಷದಲ್ಲಿ ಭಾರತೀಯ ಸೈನ್ಯವು ಅರುಣಾಚಲ ಪ್ರದೇಶದ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್(Line of Actual Control-LAC) ಬಳಿ ಸುಮಾರು 200ಕ್ಕೂ ಹೆಚ್ಚು ಮಂದಿ ಚೀನೀ ಸೈನಿಕರನ್ನು ತಡೆದಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಚೀನಾದ ಗಡಿಯ ಹತ್ತಿರ ವಾಡಿಕೆಯ ಗಸ್ತು ತಿರುಗುವಾಗ ಭಾರತ ಮತ್ತು ಚೀನೀ ಸೈನಿಕರ ನಡುವೆ ಮುಖಾಮುಖಿ ಸಂಭವಿಸಿದೆ ಎನ್ನಲಾಗಿದೆ. ಭಾರತೀಯ ಸೇನೆಯು ಸುಮಾರು 200 ಮಂದಿ ಚೀನೀ ಸೈನಿಕರನ್ನು ಗಡಿಯ ಸಮೀಪದಲ್ಲಿ ವಶಕ್ಕೆ ಪಡೆದಿದೆ.