ಅತಿಯಾದ ಆಯಾಸ, ಕೂದಲು ಉದುರುವುದು, ಅನಿಯಮಿತ ಮುಟ್ಟು ಮುಂತಾದ ಸಮಸ್ಯೆಗಳು ತಲೆದೋರುತ್ತಿವೆಯೇ? ಅಥವಾ ನಡುಕ, ಆತಂಕ, ಬೆವರು ಮತ್ತು ಹಸಿವು ಹೆಚ್ಚುತ್ತಿದೆಯೇ..? ಇವು ಥೈರಾಯ್ಡ್‌ನ ಸಾಮಾನ್ಯ ಲಕ್ಷಣಗಳು.
ಅತಿಯಾದ ಆಯಾಸ, ಕೂದಲು ಉದುರುವುದು, ಅನಿಯಮಿತ ಮುಟ್ಟು ಮುಂತಾದ ಸಮಸ್ಯೆಗಳು ತಲೆದೋರುತ್ತಿವೆಯೇ? ಅಥವಾ ನಡುಕ, ಆತಂಕ, ಬೆವರು ಮತ್ತು ಹಸಿವು ಹೆಚ್ಚುತ್ತಿದೆಯೇ..? ಇವು ಥೈರಾಯ್ಡ್‌ನ ಸಾಮಾನ್ಯ ಲಕ್ಷಣಗಳು. ಥೈರಾಯ್ಡ್ ಗ್ರಂಥಿಯು ಪ್ರಮುಖ ಹಾರ್ಮೋನ್ ನಿಯಂತ್ರಕವಾಗಿದೆ. ಅದರಲ್ಲೂ ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ. ವಿಶ್ವದಲ್ಲಿ 8 ಮಹಿಳೆಯರಲ್ಲಿ ಒಬ್ಬರಿಗೆ ಥೈರಾಯ್ಡ್ ಸಾಮಾನ್ಯವಂತೆ. ಆದರೆ ಶೇಕಡಾ 60 ರಷ್ಟು ಮಹಿಳೆಯರಿಗೆ ತಮಗೆ ಥೈರಾಯ್ಡ್ ಲಕ್ಷಣಗಳು ಇರುವುದು ತಿಳಿದೇ ಇರುವುದಿಲ್ಲ ಎಂದು ವರದಿಯಾಗಿದೆ.
ಥೈರಾಯ್ಡ್ ಪಾತ್ರವೇನು? ದೇಹದ ಬೇರೆ ಅಂಗಗಳಂತೆ, ಥೈರಾಯ್ಡ್ ಕೂಡ ಸರಿಯಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಅಗತ್ಯ. ಅದು ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಅಂಗವಾಗಿದ್ದು, ತೂಕ ನಷ್ಟ, ಚಯಾಪಚಯ, ಚರ್ಮ ಮತ್ತು ಕೂದಲಿನ ಆರೋಗ್ಯ ನಿರ್ವಹಣೆ ಮುಂತಾದ ಅಗತ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಹಾರ್ಮೋನುಗಳ ಉತ್ಪಾದನೆ ಮತ್ತು ನಿಯಂತ್ರಣದ ಕೆಲಸವನ್ನು ಮಾಡುತ್ತದೆ. ಥೈರಾಯ್ಡ್ ಹಾರ್ಮೋನ್‍ಗಳ ಮಟ್ಟದಲ್ಲಿ ಆಗುವ ಏರುಪೇರು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣ ಆಗುತ್ತದೆ.