ದೇಶಸುದ್ದಿ

ಗ್ರೀಸ್‌ನ ಅಂಚೆ ಸೇವೆಯನ್ನು ದುಪ್ಪಟ್ಟು ವೇಗಗೊಳಿಸಿದ ಸ್ವಯಂಚಾಲಿತ ಮೊಬೈಲ್ ರೋಬೋಟ್‌ಗಳು..!

Postal Service: ಗ್ರೀಸ್‌ನ ಅಂಚೆ ಸೇವೆಗೆ ರೋಬೋಟ್‌ಗಳ ಸೇರ್ಪಡೆಯಾಗಿದ್ದು ಹೆಚ್ಚು ಸೇವೆಯನ್ನು ಕಡಿಮೆ ಸಮಯದಲ್ಲಿ ಒದಗಿಸುವ ನಿಟ್ಟಿನಲ್ಲಿ ಸ್ವಯಂಚಾಲಿತ ರೋಬೋಗಳು ಅಥವಾ AMRಗಳು (ArtificialMobile Robots) ಕಾರ್ನಿರ್ವಹಿಸಲಿವೆ. ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಚಾಲಿತ 55 ಸಣ್ಣ ಗಾತ್ರದ ರೋಬೋಟ್‌ಗಳು, 4 ಚಕ್ರಗಳನ್ನು ಹೊಂದಿದ್ದು ಅಥೆನ್ಸ್‌ನಲ್ಲಿರುವ ಹೆಲೆನಿಕ್ ಪೋಸ್ಟ್‌ನ ವಿಂಗಡಣೆ ಕೇಂದ್ರದಲ್ಲಿ ಸುತ್ತಲೂ ಸಂಚರಿಸುವ ಮೂಲಕ ಪೋಸ್ಟಲ್ ವಿಂಗಡಣೆಗೆ ಸಹಕಾರ ನೀಡುತ್ತಿವೆ.

ಈ ರೋಬೋಟ್‌ಗಳು ಮುಖ್ಯವಾಗಿ ಮಾಡುವ ಕೆಲಸವೆಂದರೆ ಪೋಸ್ಟಲ್ ಕೋಡ್ ಸ್ಕ್ಯಾನ್ (Postal Code Scan) ಮಾಡುವುದು ಜೊತೆಗೆ ಪ್ಯಾಕೇಜ್ ಅನ್ನು ತೂಗುವುದು. ಇದರೊಂದಿಗೆ ಸೆನ್ಸಾರ್‌ಗಳ ನಿರ್ದೇಶನದಲ್ಲಿ ರೋಬೋಟ್‌ಗಳು ಪ್ಲಾಟ್‌ಫಾರ್ಮ್‌ನ ಸುತ್ತಲೂ ಹೊಂದಿಸಲಾದ ಮೇಲ್ ಬ್ಯಾಗ್‌ಗಳಿಗೆ ಪಾರ್ಸೆಲ್ ತುಂಬಿಸುವ ಕೆಲಸ ಮಾಡುತ್ತವೆ.

ಸರಕಾರಿ ಸ್ವಾಮ್ಯದ ಕಂಪನಿಯ ಡಿಜಿಟಲ್ ಪುನರ್‌ರಚನೆ ಯೋಜನೆಯ ಭಾಗವಾಗಿ ಕಾರ್ಯಾಚರಿಸುತ್ತಿರುವ ರೋಬೋಟ್‌ಗಳು, ಸಾಂಕ್ರಾಮಿಕದ ಸಮಯದಲ್ಲಿ ಆನ್‌ಲೈನ್ ಶಾಪಿಂಗ್ ಮೂಲಕ ಹೆಚ್ಚುತ್ತಿರುವ ಪಾರ್ಸೆಲ್‌ಗಳನ್ನು ನಿಭಾಯಿಸುವ ಗುರಿ ಹೊಂದಿದೆ. ಈ ರೋಬೋಟ್‌ಗಳು ದಿನವೊಂದಕ್ಕೆ 15 ಕೆಜಿ ತೂಕದ 168,000 ಪಾರ್ಸೆಲ್‌ಗಳನ್ನು ನಿರ್ವಹಿಸುತ್ತವೆ ಹಾಗೂ ರೋಬೋಟ್‌ಗಳಿಗೆ 4 ಗಂಟೆಗಳಿಗೊಮ್ಮೆ 5 ನಿಮಿಷಗಳವರೆಗೆ ಮಾತ್ರ ರೀಚಾರ್ಜ್ ಮಾಡಿದರೆ ಸಾಕು.

Related Articles

Leave a Reply

Your email address will not be published. Required fields are marked *

Back to top button