ರಾಜ್ಯಸುದ್ದಿ

ರಸ್ತೆ ದುರಸ್ತಿ ಮಾಡುವಂತೆ ಕರಬೂರು ಶಾಂತಕುಮಾರ್ ಆಗ್ರಹ

ಸರಗೂರು : ಮುಖ್ಯಮಂತ್ರಿಗಳು ಬರುತ್ತಾರೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಹಳ್ಳಕೊಳ್ಳಮುಚ್ಚುತ್ತಾರೆ. ಇದೇ ಕ್ಷೇತ್ರದ ಕಾಡಂಚಿನ ಭಾಗದಲ್ಲಿರುವ ರೈತರು ಜಾನುವಾರುಗಳು ತಿರುಗಾಡುವ ರಸ್ತೆ ಅವ್ಯವಸ್ಥೆಯಾಗಿದೆ ಇದು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ ಎಂದು.ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ತಾಲೂಕಿನ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಿದರಹಳ್ಳಿ ಗ್ರಾಮದಿಂದ ತಾಲೂಕಿನ ಗಡಿ ಭಾಗದ ಗೆಂಡತ್ತೂರು ಗ್ರಾಮದವರಗೆ ರಸ್ತೆ ದುರಸ್ತಿ ಮಾಡುವಂತೆ ಸೋಮವಾರ ದಂದು ಕಂಚನಹಳ್ಳಿ ಗ್ರಾಮದ ರಸ್ತೆ ಮಧ್ಯದಲ್ಲಿ ಬಳಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಭೀಮನ ಕೊಲ್ಲಿ ಶುಂಠಿ ಬೆಳೆಗಾರರ ಸಭೆಗೆ ಹೋಗುವಾಗ ರಸ್ತೆ ಹಳ್ಳಗುಂಡಿಗಳನ್ನ ನೋಡಿ ದಿಢೀರನೆ ಹಳ್ಳ ಕೊಳ್ಳಗಳ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು.ನಂತರ ಮಾತನಾಡಿದ ಮುಖ್ಯಮಂತ್ರಿ ಬರುವ ರಸ್ತೆ ಅಧಿಕಾರಿಗಳ ಕಣ್ಣಿಗೆ ಕಾಣುತ್ತದೆ ಬಿದರಹಳ್ಳಿ ಗ್ರಾಮ ಮಾರ್ಗವಾಗಿ ಮೂರ್ಬಾಂದು .ಕೆಂಚನಹಳ್ಳಿ . ಎನ್ಬೇಗೂರು.ಹೊಸಹಳ್ಳಿ.ಗೆಂಡತ್ತೂರು.

ಹಳ್ಳಿಯ ರೈತರು ದಿನನಿತ್ಯ ತಿರುಗಾಡುತ್ತಿದ್ದಾರೆ ಅದರೆ ತಾಲೂಕಿನ ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಹಾಗೂ ರಸ್ತೆ ಸರ್ಕಾರಕ್ಕೆ ಕಾಡುತ್ತಿಲ್ಲವೇ ಎಂದು ಅಗ್ರಹಿಸಿದರು.ಪ್ರಾಣಿಗಳು ಕೂಡ ತಿರುಗಾಡಲು ಯೋಗ್ಯವಲ್ಲದ ರಸ್ತೆಯಾಗಿದೆ ಮುಖ್ಯಮಂತ್ರಿಗಳ ಓಲೈಕೆಗಾಗಿ ಮೈಸೂರು ಎಚ್ ಡಿ ಕೋಟೆ ರಸ್ತೆ ಕೊಳ್ಳಮುಚ್ಚುವ ಕಾರ್ಯ ನಡೆದಿದೆ. ಕ್ಷೇತ್ರದ ಶಾಸಕರಿಗೆ ಬಿದರಹಳ್ಳಿ ರಸ್ತೆಯ ಬಗ್ಗೆ ಸರ್ಕಾರಕ್ಕೆ ಮತ್ತು ಅಧಿಕಾರಿಗಳ ಕಣ್ಣಿಗೆ ಕಾಡುತ್ತಿಲ್ಲವೇ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು .ಈ ಭಾಗದಲ್ಲಿ ದಿನನಿತ್ಯ ಈ ಭಾಗದ ರೈತರು ಸರಕು ಸಾಗಾಣಿಕೆ ಶುಂಠಿ ಮಾರಾಟ ಮಾಡಲು ಮೈಸೂರು.ಬೆಂಗಳೂರು . ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಕೇರಳಕ್ಕೆ ಮಾರಾಟ ಮಾಡಲು ಹೋಗುತ್ತಿದ್ದಾರೆ.ಈ ರಸ್ತೆಯ ಬಗ್ಗೆ ಸುಮಾರು ಬಾರಿ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು.ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ ಎಂದು ನೇರವಾಗಿ ತಿಳಿಸಿದರು. ಈ ಭಾಗದ ಜನರು ಪ್ರಾಣಿಗಳೇ ಯಾಕೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಕೂಡಲೇ ರಸ್ತೆ ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯ ಮುಖ್ಯ ಕೇಂದ್ರದಲ್ಲಿ ಸಂಬಂಧಪಟ್ಟ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದರು ಬೇಕೇ ಬೇಕು ನ್ಯಾಯ ಬೇಕು. ಕಾಡಂಚಿನ ಹಳ್ಳಿಗಳ ರಸ್ತೆ ರಿಪೇರಿ ಆಗಲೇಬೇಕು. ಎಂದು ಘೋಷಣೆ ಕೂಗಿ ಸ್ವಲ್ಪ ಕಾಲ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಗುಂಡ್ಲುಪೇಟೆ ನಾಗಾರ್ಜುನ, ಪಿ ಸೋಮಶೇಖರ್, ಸುರೇಶ್ ಶೆಟ್ಟಿ, ಮರಿಸ್ವಾಮಿ ನಾಯಕ, ಸುನಿಲ್ ಕುಮಾರ್, ಕೆಂಡಗಣ್ಣಸ್ವಾಮಿ, ಪರಶಿವಮೂರ್ತಿ, ಅಂಬಳೆ ಮಂಜುನಾಥ್, ಮಲ್ಲೇಶ್, ರಂಗರಾಜು, ಬನ್ನೂರು ಸೂರಿ, ಶಿವಸ್ವಾಮಿ ಇನ್ನು ಮುಂತಾದವರು ಇದ್ದರು.

ವರದಿ : ಹಾದನೂರು ಚಂದ್ರ tv8kannda

Related Articles

Leave a Reply

Your email address will not be published. Required fields are marked *

Back to top button