bangalore crime news: ಅಪರೂಪದ ಜಾತಿಯ ವೀರ್ಯ ತಿಮಿಂಗಲದ ವಾಂತಿ(Ambergris)ಯನ್ನು ಮಾರಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಂಬರ್ ಗ್ರೀಸ್ ಎಂದು ಕರೆಯ್ಪಡುವ ತಿಮಿಂಗಲದ ವಾಂತಿಯ ಬೆಲೆ ಬರೋಬ್ಬರಿ 17 ಕೋಟಿ ರೂಪಾಯಿ.

17 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಐವರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಪುನೀತ್, ಮಧುಕುಮಾರ್, ನಂದೀಶ್, ಯೋಗೇಶ್ ಹಾಗೂ ಗೋಪಾಲ್ ಬಂಧಿತ ಆರೋಪಿಗಳು.
ಪೊಲೀಸರ ದಾಳಿ ವೇಳೆ ಎ1 ಆರೋಪಿ ಪ್ರಸನ್ನ ಅಲಿಯಾಸ್ ಯಾರ್ಬಿಟ್ ನಾಪತ್ತೆಯಾಗಿದ್ದಾರೆ. ಕೋಟ್ಯಾಂತರ ಮೌಲ್ಯದ ಬೆಲೆಬಾಳುವ 17 ಕೆಜಿ ಅಂಬರ್ ಗ್ರೀಸ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.