IPL 2025: ಆರ್ಸಿಬಿ ಕಪ್ ಗೆಲುವಿನ ಅಭಿಯಾನ ಶುರು

ಈಡನ್ ಗಾರ್ಡನ್ಸ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಸೀಸನ್ನ ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಡುವೆ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಆರ್ಸಿಬಿ 7 ವಿಕೆಟ್ಗಳಿಂದ ಸೋಲಿಸಿತು.
ಈ ಗೆಲುವಿನೊಂದಿಗೆ, ಆರ್ಸಿಬಿ 2008 ರ ಐಪಿಎಲ್ ಸೀಸನ್ನ ಉದ್ಘಾಟನಾ ಸೋಲಿನ ಸೇಡನ್ನು ಯಶಸ್ವಿಯಾಗಿ ತೀರಿಸಿಕೊಂಡಿದೆ.
ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅಬ್ಬರ ಇನಿಂಗ್ಸ್ ಆಡಿದರು. ನಾಯಕ ಪಾಟಿದಾರ್ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಆರ್ಸಿಬಿ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು. ಈಡನ್ ಗಾರ್ಡನ್ಸ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್ಸಿಬಿ ಇನ್ನೂ 22 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 177 ಗಳಿಸುವ ಮೂಲಕ ಜಯ ಸಾಧಿಸಿತು.
ಆರ್ಸಿಬಿ ಪರ ತಮ್ಮ ಮೊದಲ ಪಂದ್ಯವನ್ನು ಆಡಿದ ಫಿಲಿಪ್ ಸಾಲ್ಟ್ ಕೇವಲ 31 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಾಯದಿಂದ 180.65 ರನ್ಗಳ ಸರಾಸರಿಯಲ್ಲಿ 56 ರನ್ ಗಳಿಸಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 163.89 ಸ್ಟ್ರೈಕ್ ರೇಟ್ನೊಂದಿಗೆ 59 ರನ್ ಗಳಿಸಿದರು.