ದೇಶ
‘ಏರ್ ಇಂಡಿಯಾ’ ಖರೀದಿಸಿದ ‘ಟಾಟಾ ಸನ್ಸ್’
ನವದೆಹಲಿ : ಇಂದು ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ( Air India ) ಖರೀದಿ ಸಂಬಂಧ ಬಿಡ್ ನಡೆಸಲಾಯಿತು. ಈ ಬಿಡ್ ನಲ್ಲಿ ವಿವಿಧ ಸಂಸ್ಥೆಗಳು ಪಾಲ್ಗೊಂಡಿದ್ದವು. ಅಂತಿಮವಾಗಿ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಖರೀದಿಸೋದ್ರಲ್ಲಿ (Tata Sons wins Air India bid) ಸಫಲವಾಗಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ.
ಸರ್ಕಾರಿ ಮೂಲಗಳ ಪ್ರಕಾರ, ರಾಷ್ಟ್ರೀಯ ವಾಹಕ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದಿದೆ. ಸಾಲ್ಟ್-ಟು-ಸಾಫ್ಟ್ ವೇರ್ ಸಮೂಹವು ಸೆಪ್ಟೆಂಬರ್ 15 ರಂದು ವಿಮಾನಯಾನಕ್ಕಾಗಿ ಅಂತಿಮ ಬಿಡ್ ಸಲ್ಲಿಸಿತ್ತು.
ಸ್ಪೈಸ್ ಜೆಟ್ ಪ್ರವರ್ತಕ ಅಜಯ್ ಸಿಂಗ್ ಕೂಡ ವಿಮಾನಯಾನಕ್ಕಾಗಿ ಬಿಡ್ ಸಲ್ಲಿಸಿದ್ದರೆ, ಸರ್ಕಾರಿ ಮೂಲಗಳು ಟಾಟಾ ಸನ್ಸ್ ವಿಮಾನಯಾನವನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಬಿಡ್ ಅನ್ನು ಗೆದ್ದಿದೆ ಎಂದು ಖಚಿತಪಡಿಸಿವೆ.