ಇತ್ತೀಚಿನ ಸುದ್ದಿ
ವೇದ ಮತ್ತು ಜ್ಯೋತಿಷ್ಯ ಪ್ರಮಾಣ ಪತ್ರ ವಿತರಣೆ.

ಮಸ್ಕಿ : ತಾಲ್ಲೂಕಿನ ಹಸ್ಮಕಲ್ ಗ್ರಾಮದ ಶ್ರೀ ವೇ.ಮೂ. ಸಿದ್ಧರಾಮಯ್ಯಸ್ವಾಮಿ ಹಿರೇಮಠ ವೇದ ಮತ್ತು ಜ್ಯೋತಿಷ್ಯ ಗುರುಕುಲ ಪಾಠಶಾಲೆ ಯಲ್ಲಿಪ್ರಾಥಮಿಕ ಹಂತದ ವೇದ ಹಾಗೂ ಜ್ಯೋತಿಷ್ಯವನ್ನು ಅಭ್ಯಾಸ ಮಾಡಿ, ಒಳ್ಳೆಯ ಸಂಸ್ಕಾರವನ್ನು ಕಲಿತವರಾಗಿದ್ದು, ಇವರ ಮುಂದಿನ ಪೌರೋಹಿತ್ಯ ಜೀವನ ಉಜ್ವಲಗೊಳ್ಳಲಿ ಹಾಗೂ ಜನರ ದುಃಖ, ಕಷ್ಟಗಳನ್ನು ಪರಿಹರಿಸುವ ಶಕ್ತಿ ಕುಲದೇವರು ನೀಡಿ ಹಾರೈಸಲಿ ಎಂದು ಈ ಮೂಲಕ ಪ್ರಮಾಣ ಪತ್ರ ನೀಡಿ ಗೌರವಿಸಲಾಗಿದೆ.
ಪ್ರಮಾಣ ಪತ್ರ ಪಡೆದರವಿಕುಮಾರ ಸ್ಥಾವರಮಠ ಹಾಗೂಬಸವರಾಜ ಸ್ವಾಮಿ ಕಾರಲಕುಂಟಿ, ಮಸ್ಕಿ ಇವರು ಸನಾತನ ಧರ್ಮದ ವೇದಜ್ಞಾನ ಶುದ್ಧ ಸಿದ್ಧಿ ಪೂರ್ವಕ ಪೂಜಾ ಕಾರ್ಯ, ಯಂತ್ರ ಸಾಧನೆಯನ್ನು ತಿಳಿಸಿಕೊಟ್ಟು ಸೇವ ಕಾರ್ಯಕ್ಕೆ ಪ್ರಮಾಣ ಪತ್ರವನ್ನು ನೀಡಿ ಆಶೀರ್ವದಿಸಿದ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ ಪುರಸ್ಕೃತರಾದ ವೇ. ಮೂ. ಶ್ರೀಧರ ಸ್ವಾಮಿ ಹಿರೇಮಠ ಹಸಮಕಲ್ ಗುರುಗಳಿಗೆ ಅನಂತ ಭಕ್ತಿ ಪೂರ್ವಕ ಧನ್ಯವಾದಗಳು ಹೇಳಿದರು.