ಸುದ್ದಿ

ವಿಶ್ವ ಮಧುಮೇಹ ದಿನಾಚರಣೆ, ಸಾರ್ವಜನಿಕರಿಗೆ ಅರಿವಿನ ಜಾತಾ

ಬೆಂಗಳೂರು: ಸಾರ್ವಜನಿಕರಿಗೆ ಮಧುಮೇಹದ ಬಗ್ಗೆ ಕರಪತ್ರ ವಿತರಣೆ, ಅರಿವು ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ಅರ್ಥ ಪೂರ್ಣವಾಗಿ ಬೆಂಗಳೂರಿನಲ್ಲಿ ಆಚರಣೆ ಮಾಡಲಾಯಿತು.

ಬೆಂಗಳೂರಿನ ದೊಡ್ಡಕಲ್ಲಸಂದ್ರ ಸಿಟಿ ಎಂಜಿನಿಯರಿಂಗ್ ಕಾಲೇಜುನಿಂದ ಜೈಮಸ್ ಆಸ್ಪತ್ರೆ, ಅಪಾರ್ಟ್ಮೆಂಟ್ ನಿವಾಸಿಗಳ ಸಂಘ, ಸ್ಥಳೀಯ ಸಂಘ ಸಂಸ್ಥೆಗಳ, ಸಾರ್ವಜನಿಕರು,ವೈದ್ಯರು, ವಿದ್ಯಾರ್ಥಿಗಳು ಸಹಯೋಗದೊಂದಿಗೆ 3 ಕಿಮೀ ವರೆಗೆ ನಡೆಗೆ ಮಾಡುವ ಮೂಲಕ ಸಾರ್ವಜನಿಕ ಮಧುಮೇಹ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದರು.
ಅರಿವಿನ ಜಾತದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆ ಪುಟ್ಟ ಬಾಲಕಿಗೆ ತಾಯಿ ಭುವನೇಶ್ವರಿ ವೇಷ ಹಾಕಿಸುವ ಮೂಲಕ ಅರಿವಿನ ಜಾತದಲ್ಲಿ ವಿಶೇಷತೆ ಮೆರೆದರು.
ಜೈಮಸ್ ಆಸ್ಪತ್ರೆಯ ಮಧುಮೇಹ ವಿಭಾಗದ ವೈದ್ಯಕೀಯ ನಿರ್ದೇಶಕ ಡಾ.ನಾಗರಾಜು ಮಾತನಾಡಿ, ನಿತ್ಯ ಮಧುಮೇಹದ ಬಗ್ಗೆ ಜನರಿಗೆ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಅದು ಎಲ್ಲರೂ ಮಾಡಬೇಕಾಗಿದೆ. ಚಿಕ್ಕವಯಸ್ಸಿನಿಂದ ದೊಡ್ಡವರ ವರೆಗೆ ಮಧುಮೇಹ ಸಾಮಾನ್ಯವಾಗಿಬಿಟ್ಟಿದೆ. ನಿಯಂತ್ರಣ ಮಾಡುವ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ.

ಮಧುಮೇಹ ಬರಲು ಮುಖ್ಯ ಕಾರಣ ಜೀವನ ಶೈಲಿ, ಆಹಾರ ಪದ್ಧತಿ ಸರಿಯಾದ ಕ್ರಮವಾಗಿಲ್ಲ. ಹಕ ಕಾಲದ ಆಹಾರ ಪದ್ಧತಿ, ಜೀವನಕ್ರಮ ರೂಢಿಸಿಕೊಂಡರೆ ಸ್ವಲ್ಪಮಟ್ಟಿಗಾದರೂ ಸುಧಾರಿಸಬಹುದು ಎಂದರು.

ಅರಿವಿನ ಜಾತದಲ್ಲಿ IMA ಬೆಂಗಳೂರು ಶಾಖೆಯ ಅಧ್ಯಕ್ಷ ಡಾ.ವಿಜಯಾನಂದ ಮಾತನಾಡಿ, ಸಣ್ಣವಯಸ್ಸಿನವರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಮಧುಮೇಹ ಕಾಣಿಸಿಕೊಂಡು ಪ್ರಾಣಕ್ಕೂ ಕುತ್ತು ತರುವ ಕೆಲಸ ಮಾಡಲಾಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಧುಮೇಹ ನಿಯತ್ರಣದ ಬಗ್ಗೆ ಚರ್ಚೆಗಳು, ಸಭೆ ಸಮಾರಂಭಗಳು ಮಾಡುತ್ತಿದ್ದಾರೆ.

ಮಧುಮೇಹ ಉಳವನವಾದರೆ ಕರುಳು, ಮೂತ್ರಪಿಂಡ, ಸ್ವಾಶಕೋಶ, ಹೃದಯ, ಕಣ್ಣು, ಎಲ್ಲವನ್ನೂ ನಾಶಮಾಡುತ್ತದೆ, ಕಾಯಿಲೆ ದೊಡ್ಡ ಪೆಡಂಭೂತವಾಗಿ ಬಿಟ್ಟಿದೆ ಎಂದು ಎಂದರು.

IMA ಬೆಂಗಳೂರು ಚಾಪ್ಟರ್ ನ ಕಾರ್ಯದರ್ಶಿ ಡಾ.ಮಹೇಶ್ ಮಾತನಾಡಿ, ಮಧುಮೇಹ ಒಮ್ಮೆ ಅಂಟಿದರೆ ಜೀವನದುದ್ದಕ್ಕೂ ಅನುಭವಿಸಬೇಕು, ವಿಶ್ವ ಮಟ್ಟದಲ್ಲಿ ರೋಗ ಅವ್ಯಾಹತವಾಗಿ ಹಬ್ಬಿದೆ. ಹೀಗಾಗಿ ಕಡಿಮೆ ಮಾಡಿಕೊಳ್ಳುವ ವಿಧಾನಗಳು ಏನು ಎಂಬುದರ ಬಗ್ಗೆ ಅರಿಯಬೇಕು ಎಂದರು.

ಹಿಂದೆ ಮಧುಮೇಹ ಕಾಣಿಸಿಕೊಂಡರೆ ಜೀವನದ ಉದ್ದಕ್ಕೂ ಅನುಭವಿಸಬೇಕಾಗಿತ್ತು, ತಂತ್ರಜ್ಞಾನ, ಆವಿಷ್ಕಾರ, ಸಂಶೋಧನೆ, ಆಧುನಿಕ ವೈದ್ಯಕೀಯ ಪದ್ಧತಿ, ವೈಧ್ಯಕೀಯ ಸೇವೆಗಳು ಮುಂಚೂಣಿಯಲ್ಲಿರುವ ಕಾರಣ ಯಾರು ಎದರುವ ಅಗತ್ಯವಿಲ್ಲ ಎಂದರು. ಮೈದಾ, ಸಕ್ಕರೆ, ಉಪ್ಪು ಇವುಗಳನ್ನು ಮೊದಲು ದೂರವಿಡಬೇಕೆಂದರು.

ಜೈ ಮಸ್ ಆಸ್ಪತ್ರೆಯ ಎಕ್ಸಿಕ್ಯೂಟಿವ್ ನಿರ್ದೇಶಕರಾದ ಡಾ.ರಾಜೇಶ್ ಮಾತನಾಡಿ, ಮಧುಮೇಹ ಬಂದಿದೆ ಎಂದರೆ ಒಂದು ಕಾರಣ ಈಟ್ಟುಕೊಂಡು ಹೇಳಲು ಸಾಧ್ಯವಿಲ್ಲ. ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ರತಿ ಕ್ಷಣದಲ್ಲೂ ಆರೋಗ್ಯದ ಬಗ್ಗೆ ಜಾಗರೂಕತೆ ಬೆಳೆಸಿಕೊಳ್ಳಬೇಕು ಎಂದರು.

ಮಧುಮೇಹ ಅರಿವಿನ ಜಾತದಲ್ಲಿ ನೂರಾರು ಜನ ವೈದ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ ವರ್ಗ, ವೈದ್ಯರು, ಕೈಜೋಡಿಸಿ ಯಶಸ್ವಿಗೊಳಿಸಿದರು.

ವರದಿ: ಮುಸ್ತಫಾ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button