ರಾಜ್ಯಸುದ್ದಿ

ಚಂದ್ರಾಘಂಟಾ ದೇವಿಯ ಆರಾಧನೆ ಮಾಡುವುದು ಹೇಗೆ? ನವರಾತ್ರಿ ಮೂರನೇ ದಿನದ ಪೂಜಾ ವಿಧಿ-ವಿಧಾನ ಹೀಗಿದೆ..!

ನವರಾತ್ರಿಯ (Navaratri)ಸಮಯದಲ್ಲಿ ದುರ್ಗಾದೇವಿಯ(Durga Devi) ಒಂಬತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿಗಳನ್ನು ಪೂಜಿಸುತ್ತಾರೆ. ಇಂದು, ಅಕ್ಟೋಬರ್ 9, ಹಬ್ಬದ ಮೂರನೇ ದಿನ ಅಂದರೆ ಮಾಹ ಚಂದ್ರಘಂಟಾ (Chandraghanta Devi)ದೇವಿಯನ್ನು ಪೂಜಿಸುತ್ತಾರೆ. ತಾಯಿ ಜಗತ್ತಿನಲ್ಲಿ ನ್ಯಾಯ ಮತ್ತು ಧರ್ಮವನ್ನು ಸೂಚಿಸುತ್ತಾಳೆ. ಈಕೆ ಪಾರ್ವತ ದೇವತೆಯ ವಿವಾಹಿತ ರೂಪ.

ಚಂದ್ರಘಂಟಾ ಎನ್ನುವ ಅರ್ಥ ಘಂಟೆಯಾಕಾರದ ಚಂದ್ರನನ್ನು ತಲೆಯಲ್ಲಿ ಧರಿಸಿದವಳು. ಚಂದ್ರಘಂಟಾ ದೇವಿಯ  ಮೂರನೇ ಕಣ್ಣು ಸದಾ ತೆರೆದೇ ಇರುತ್ತದೆ. ಯಾವುದೇ ಸಮಯದಲ್ಲಿಯೂ ದುಷ್ಟ ಶಕ್ತಿಗಳ ಸಂಹಾರಕ್ಕೆ ಸಿದ್ದಳಾಗಿರುತ್ತಾಳೆ. ತಾಯಿ ತನ್ನ ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹದ ಮೇಲೆ ಕುಳಿತಿರುತ್ತಾಳೆ. ಈ ತಾಯಿಯ  ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು ಎನ್ನುವ ನಂಬಿಕೆ ಇದೆ.

ಇನ್ನು ಉತ್ತರ ಭಾರತದಲ್ಲಿ ಇನ್ನೊಂದು ರೀತಿಯಲ್ಲಿ ಈಕೆಯನ್ನು ಆರಾಧಿಸುತ್ಥಾರೆ ಮತ್ತು ಚಂದ್ರಾಘಂಟಾ ಎಂಬ ಪದಕ್ಕೆ ವಿಭಿನ್ನ ಅರ್ಥವನ್ನು ನೀಡುತ್ತಾರೆ. ಅವರ ಪ್ರಕಾರ  ಚಂದ್ರ ಎಂಬ ಪದದ ಅರ್ಥ ಚಂದ್ರ ಮತ್ತು ಘಂಟಾ ಎಂದರೆ ಜ್ಞಾನ ಸಾಗರವನ್ನು ಹೊಂದಿರುವ ದೇವತೆ ಮತ್ತು ಶಕ್ತಿ, ಶೌರ್ಯ ಮತ್ತು ಧೈರ್ಯವನ್ನು ಹರಡುತ್ತಾಳೆ ಎಂದು ಹೇಳಲಾಗುತ್ತದೆ. ನಮ್ಮಲ್ಲಿರುವ ರಾಕ್ಷಸರ ವಿರುದ್ದ ಹೋರಾಡುವ ಶಕ್ತಿಯನ್ನು ತಾಯಿ ನಮಗೆ ನೀಡುತ್ತಾಳೆ ಎಂಬ ನಂಬಿಕೆ ಇದೆ.

Related Articles

Leave a Reply

Your email address will not be published. Required fields are marked *

Back to top button