ರೇಖಾ ಕದಿರೇಶ್ ಕೊಲೆ ಕೇಸ್ : ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ ಪೊಲೀಸರು
ಬೆಂಗಳೂರು,ಸೆ.29- ಮಾಜಿ ಕಾಪೆರ್ರೇಪ್ರೊಟರ್ ರೇಖಾ ಕದಿರೇಶ್(45) ಅವರ ಕೊಲೆ ಪ್ರಕರಣಕ್ಕೆ ಸಂಬಂಸಿದಂತೆ ಕಾಟನ್ಪೇಟೆ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಸೆ.21ರಂದು 31ನೇ ಎಸಿಎಂಎಂ ನ್ಯಾಯಾಲಯಕ್ಕೆ 8 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಚಾರ್ಜ್ಶೀಟ್ (ದೋಷಾರೋಪಣ ಪಟ್ಟಿ ) ಸಲ್ಲಿಸಿದರು. ಈ ಪ್ರಕರಣಕ್ಕೆ ಸಂಬಂಸಿದಂತೆ ರೇಖಾ ಕದಿರೇಶ್ ಪತಿಯ ಸಹೋದರಿ ಮಾಲಾ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಸಿದ್ದು, ಇದೀಗ ಸಂಪೂರ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಆಂಜನಪ್ಪ ಗಾರ್ಡನ್ ನಿವಾಸಿ, ಮಾಜಿ ಕಾಪೆರ್ರೇಪೊಟರ್ ರೇಖಾ ಕದಿರೇಶ್(43) ಅವರು ಕಳೆದ ಜೂನ್ 24ರಂದು ಬೆಳಗ್ಗೆ 10.30ರ ಸುಮಾರಿನಲ್ಲಿ ದಿನಸಿ ಕಿಟ್ಗಳನ್ನು ವಿತರಿಸಿ ಕಚೇರಿಯಿಂದ ಮನೆಗೆ ತೆರಳುವಾಗ ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಕಾಟನ್ಪೇಟೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯಾಚರಣೆ ನಡೆಸಿ ಮೊದಲು ಇಬ್ಬರು ಆರೋಪಿಗಳನ್ನು ಬಂಸಿ ವಿಚಾರಣೆ ನಡೆಸಿ ನಂತರ ಉಳಿದ ಆರೋಪಿಗಳನ್ನು ಬಂಸಿದ್ದರು.
ಆರೋಪಿಗಳಾದ ಅಂಜನಪ್ಪ ಗಾರ್ಡನ್ ನಿವಾಸಿ ರೇಖಾ ಕದಿರೇಶ್ ಅವರ ಪತಿಯ ಸಹೋದರಿ ಮಾಲಾ(60) ಮತ್ತು ಪೀಟರ್(46), ಸೂರ್ಯ(20), ಸ್ಟೀಫನ್(21), ಪುರುಷೋತ್ತಮ್(22), ಅಜಯ್(21), ಅರುಣ್ಕುಮಾರ್(36) ಮತ್ತು ಸಿಲ್ವರಾಜ್ ಅಲಿಯಾಸ್ ಕ್ಯಾಪ್ಟನ್(36) ಎಂಬುವರ ವಿರುದ್ಧ ಕಾಟನ್ಪೇಟೆ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಾದ ಮಾಲಾ ಮತ್ತು ಸೆಲ್ವರಾಜ್ ಅವರು ಜಾಮೀನು ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಇವರಿಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.