ಡ್ರಗ್ಸ್ ಕೇಸ್ನಲ್ಲಿ ಸಹನಟ ಅರೆಸ್ಟ್: ಸಿಂಗಂ, ಅಣ್ಣಾಬಾಂಡ್, ಪರಮಾತ್ಮ. ಸಿನಿಮಾದಲ್ಲೂ ನಟಿಸಿದ್ದ
ಬೆಂಗಳೂರು: ಡ್ರಗ್ಸ್ ಗುಮ್ಮ ಸಿನಿಮಾ ರಂಗವನ್ನು ಬೆಂಬಿಡದೆ ಕಾಡುತ್ತಿದ್ದು, ಡ್ರಗ್ಸ್ ಕೇಸ್ನಲ್ಲಿ ಇದೀಗ ದಕ್ಷಿಣ ಭಾರತದ ಸ್ಟಾರ್ ಸಿನಿಮಾಗಳಲ್ಲಿ ಸಹ ನಟನಾಗಿ ಬಣ್ಣ ಹಚ್ಚಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ.
ಆರೋಪಿ ಚೆಕುಮ್ವೆ ಮೆಲ್ವಿನ್ ಬಂಧಿತ. ನೈಜೀರಿಯಾ ಮೂಲದ ಚೆಕುಮ್ವೆ ಮೆಡಿಕಲ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ಮುಂಬೈನಲ್ಲಿ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ನಟನಾ ತರಬೇತಿ ಪಡೆದಿದ್ದ ಈತ, ಕನ್ನಡ, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ನಟಿಸಿದ್ದ.
ವಿಶ್ವರೂಪಂ, ಸಿಂಗಂ, ಅಣ್ಣಾಬಾಂಡ್, ದಿಲ್ ವಾಲೇ, ಜಂಬೂಸವಾರಿ, ಪರಮಾತ್ಮ ಸೇರಿದಂತೆ 20ಕ್ಕೂ ಹೆಚ್ಚು ಸಿನಿಮಾದಲ್ಲಿ ಚೆಕುಮ್ವೆ ಮೆಲ್ವಿನ್ ನಟಿಸಿದ್ದಾನೆ. ಮೇಲ್ನೋಟಕ್ಕೆ ನಟನಂತೆ ಗುರುತಿಸಿಕೊಂಡಿದ್ದು, ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ. ಎಂಡಿಎಂಎ, ಆಯಶಿಶ್ ಆಯಿಲ್ ಅನ್ನು ಸಿರಾಫ್ ಮಾದರಿಯ ಬಾಟಲಿಯಲ್ಲಿ ಹಾಕಿ ಬಿಜಿನೆಸ್ಮನ್ಗಳು ಮತ್ತು ಕಾಲೇಜು ಯುವಕರಿಗೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೆ.ಜಿ. ಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 8 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.