ಸುದ್ದಿ
ಕೋಲ್ಕತ್ತ: ಎರಡು ಅಂತಸ್ತಿನ ಕಟ್ಟಡ ಕುಸಿತ, ಇಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ
ಕೋಲ್ಕತ್ತ: ನಗರದ ಅಹಿರಿತೋಲಾ ಲೇನ್‌ನ ಉತ್ತರ ಭಾಗದಲ್ಲಿ ಎರಡು ಅಂತಸ್ತಿನ ಹಳೆಯ ಕಟ್ಟಡವೊಂದರ ಭಾಗವು ಬುಧವಾರ ಮುಂಜಾನೆ ಕುಸಿದು ಬಿದ್ದಿದ್ದು ಮಗು ಸೇರಿದಂತೆ ಇಬ್ಬರು ಅವಶೇಷಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡದ ಒಂದು ಭಾಗವು ಬೆಳಿಗ್ಗೆ 6.40ರ ಸುಮಾರಿಗೆ ಕುಸಿದಿದೆ. ತೆರವು ಕಾರ್ಯಾಚರಣೆಗೆ ವಿಪತ್ತು ನಿರ್ವಹಣೆ, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಇದುವರೆಗೆ ನಾಲ್ಕು ಜನರನ್ನು ರಕ್ಷಿಸಲಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮಗು ಮತ್ತು ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ಹೇಳಿದರು.