ಐದು ವರ್ಷಗಳ ಬಳಿಕ ಮೂರು ಸಿನಿಮಾ ಹೊತ್ತು ತಂದಿದ್ದಾರೆ ವಿಜಯಪ್ರಸಾದ್
ವಿಜಯಪ್ರಸಾದ್ ಕನ್ನಡ ಚಿತ್ರರಂಗದ ಅಪರೂಪದ ನಿರ್ದೇಶಕ. ಇವರ ಸಿನಿಮಾಗಳು ಪ್ರೇಕ್ಷಕರನ್ನು ನಿರಾಸೆಗೊಳಿಸಿಲ್ಲ, ಚೇಷ್ಟೆ, ಚೆಲ್ಲಾಟಗಳ ಜೊತೆಗೆ ಜೀವನ ಪ್ರೀತಿಯನ್ನು ಕಟ್ಟಿಕೊಡುವುದು ವಿಜಯಪ್ರಸಾದ್ ಶೈಲಿ.
ವಿಜಯಪ್ರಸಾದ್ ನಿರ್ದೇಶಿಸಿದ್ದ ‘ನೀರುದೋಸೆ’ ಸಿನಿಮಾ ಬಿಡುಗಡೆ ಆಗಿ ಐದು ವರ್ಷಗಳು ಕಳೆದಿವೆ. ಅದಾದ ಬಳಿಕ ವಿಜಯಪ್ರಸಾದ್‌ರ ಯಾವೊಂದು ಸಿನಿಮಾ ಸಹ ಬಿಡುಗಡೆ ಆಗಿಲ್ಲ. ಇದೀಗ ಒಂದೇ ಬಾರಿ ಮೂರು ಸಿನಿಮಾಗಳನ್ನು ತೆರೆಗೆ ತರಲು ರೆಡಿಯಾಗಿದ್ದಾರೆ.
ವಿಜಯಪ್ರಸಾದ್ ನಿರ್ದೇಶಿಸಿ, ಜಗ್ಗೇಶ್ ನಾಯಕ ನಟನಾಗಿ ನಟಿಸಿರುವ ‘ತೋತಾಪುರಿ’ ಸಿನಿಮಾ ಬಿಡುಗಡೆಗೆ ತಯಾರಿದೆ, ಅದಾದ ಬಳಿಕ ಸತೀಶ್ ನೀನಾಸಂ, ಹರಿಪ್ರಿಯ ನಟಿಸಿರುವ ‘ಪೆಟ್ರೊಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ ‘ತೋತಾಪುರಿ ಭಾಗ 2’ ಬಿಡುಗಡೆ ಆಗಲಿದೆ.
ಮುಂದಿನ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ ‘ತೋತಾಪುರಿ ಭಾಗ 1’ ಸಿನಿಮಾ ಬಿಡುಗಡೆ ಆಗಲಿದೆ. ಅದಾದ ಬಳಿಕ ನವೆಂಬರ್ ತಿಂಗಳಲ್ಲಿ ‘ಪೆಟ್ರೊಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಬದುಕು ಮತ್ತು ಬೆಳಕು ಎಂಬ ಪರಿಕಲ್ಪನೆ ಮೇಲೆ ನಿರ್ಮಿಸಲಾದ ಸಿನಿಮಾ ಆಗಿದೆ. ಅದಾದ ಎರಡು ವಾರಗಳ ಬಳಿಕ ‘ತೋತಾಪುರಿ 2’ ಸಿನಿಮಾ ಬಿಡುಗಡೆ ಆಗಲಿದೆ.