ರಾಜ್ಯಸುದ್ದಿ

ಈ ದೇವಸ್ಥಾನಕ್ಕೆ ಹರಕೆ ಕಟ್ಟಿದರೆ ಯಾವುದೇ ಚರ್ಮ ವ್ಯಾಧಿಯಿದ್ದರೂ ಗುಣ..!

ದಕ್ಷಿಣಕನ್ನಡ(dakshina kannada) : ಚರ್ಮಕ್ಕೆ ಸಂಬಂಧಪಟ್ಟ ಯಾವುದಾದರೂ ಸಮಸ್ಯೆಯಿದ್ದಲ್ಲಿ(skin disease), ವೈದ್ಯರನ್ನು ಭೇಟಿಯಾಗುವ ಮೊದಲು ಸುಳ್ಯದ ಕ್ಷೇತ್ರವೊಂದಕ್ಕೆ ಭೇಟಿ ನೀಡೋದು ಉತ್ತಮ ಎನ್ನುವ ನಂಬಿಕೆ ಈ ಭಾಗದ ಆಸ್ತಿಕರದ್ದಾಗಿದೆ. ಈ ಕ್ಷೇತ್ರದ ಪಕ್ಕದಲ್ಲೇ ಹರಿಯುವ ಹಳ್ಳವೊಂದರಲ್ಲಿರುವ ಮೀನುಗಳೇ (fishes) ಎಲ್ಲಾ ಚರ್ಮರೋಗಗಳನ್ನು ನಿವಾರಿಸುವ ಸ್ಕಿನ್ ಡಾಕ್ಟರ್ ಗಳು. ಹೌದು ಈ ಮೀನುಗಳಿಗೆ ಹರಕೆ ಹೊತ್ತು ಅಕ್ಕಿ ಹಾಗೂ ಹೊದಲು ನೀಡಿದಲ್ಲಿ ಚರ್ಮರೋಗವು ಮಾಯವಾಗುತ್ತದೆ ಎನ್ನುವ ಬಲವಾದ ವಿಶ್ವಾಸ ಈ ಭಾಗದ ಜನರದ್ದಾಗಿದೆ.

ಎಲ್ಲಾ ರೀತಿಯ ಚರ್ಮರೋಗಗಳು ಮಾಯ?

ಮನುಷ್ಯ ದೇಹಕ್ಕೆ ಕಾಡುವ ಪ್ರತಿಯೊಂದು ರೋಗ-ರುಜಿನಾಧಿಗಳಿಗೆ ಪ್ರಕೃತಿಯಿಂದಲೇ ಚಿಕಿತ್ಸೆ ಪಡೆಯುವ ಅವಕಾಶವಿದೆ. ಅದರಲ್ಲೂ ನಮ್ಮ ದೇಶದಲ್ಲಿ ಪ್ರಕೃತಿಯಿಂದ ಸಿಗುವ ಗಿಡಮೂಲಿಕೆಗಳನ್ನೇ ಬಳಸಿಕೊಂಡು ಹಿರಿಯರು ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಂಡಿದ್ದರು ಎನ್ನುವುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿದೆ. ಇದೇ ರೀತಿಯ ನಂಬಿಕೆಯೊಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಪುರಾತನ ಕ್ಷೇತ್ರವಾದ ತೋಡಿಕಾನ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಜನಜನಿತವಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದ ಪಕ್ಕದಲ್ಲೇ ಹರಿಯುವಂತಹ ಹಳ್ಳವೊಂದರಲ್ಲಿ ಸಾವಿರಾರು ಸಂಖ್ಯೆಯ ಮೀನುಗಳಿದ್ದು, ಈ ಮೀನುಗಳಿಗೆ ಅಕ್ಕಿ ಹಾಗೂ ಹೊದಲು ಹಾಕಿ ಪ್ರಾರ್ಥನೆ ಮಾಡಿಕೊಂಡಲ್ಲಿ ಎಲ್ಲಾ ರೀತಿಯ ಚರ್ಮರೋಗಗಳು ಮಾಯವಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ.

ಪೌರಾಣಿಕ ಇತಿಹಾಸವೂ ಇದೆ 

ಈ ನಂಬಿಕೆಯ ಹಿನ್ನೆಲೆಯಲ್ಲಿ ಇಲ್ಲಿ ಪೌರಾಣಿಕ ಕಥೆಯೊಂದಿದ್ದು, ಕಣ್ವ ಮಹರ್ಷಿಯು ತೋಡಿಕಾನ ಕ್ಷೇತ್ರದಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು ಎನ್ನುವ ಐತಿಹ್ಯವಿದೆ. ಕಣ್ವ ಮಹರ್ಷಿಗಳು ತೋಡಿಕಾನದ ಕಾನನದ ನಡುವೆಯೇ ತಮ್ಮ ತಪಸ್ಸನ್ನು ಮಾಡುತ್ತಿದ್ದ ಸಮಯದಲ್ಲಿ ಕ್ಷೇತ್ರದ ಪಕ್ಕದಲ್ಲೇ ಇರುವ ದೇವರಗುಂಡಿ ಎನ್ನುವ ಜಲಪಾತದಿಂದ ಶಿವಲಿಂಗವನ್ನು ತೋಡಿಕಾನ ಕ್ಷೇತ್ರಕ್ಕೆ ತರಲು ನಿರ್ಧರಿಸುತ್ತಾರೆ. ಈ ಸಂದರ್ಭದಲ್ಲಿ ಕಣ್ವ ಮಹರ್ಷಿಗಳು ಶಿವನನ್ನು ಪ್ರಾರ್ಥಿಸಿದಾಗ ಶಿವ ಮಹರ್ಷಿಯ ಮುಂದೆ ಪ್ರತ್ಯಕ್ಷನಾಗುತ್ತಾನೆ. ಶಿವನ ಜೊತೆಗೆ ವಿಷ್ಣುವೂ ಮತ್ಸರೂಪದಲ್ಲಿ ಬಂದು ಮಹರ್ಷಿಯ ಇಚ್ಛೆಯಂತೆ ದೇವರಗುಂಡಿಯಲ್ಲಿ ಮುಳುಗಿ ಜಲಮಾರ್ಗವಾಗಿ ತೋಡಿಕಾನ ಕ್ಷೇತ್ರ ತಲುಪುತ್ತಾರೆ.

Related Articles

Leave a Reply

Your email address will not be published. Required fields are marked *

Back to top button