ಬೋವಿ ಜನಾಂಗಕ್ಕೆ ಸೇರಿದ ಸಾಗುವಳಿ ಭೂಮಿ ಲಪಟಾಯಿಸಲು ಯತ್ನ

ಚಾಮರಾಜನಗರ:ಡಿ.03; ಗುಂಡ್ಲುಪೇಟೆ ತಾಲೂಕು ಯಡವನಹಳ್ಳಿ ದಾಖಲೆ ಪಿ.ಸಿ ವರ್ಗೀಸ್ ಕಾಲೋನಿಯಲ್ಲಿರುವ ಪರಿಶಿಷ್ಟ ಜನಾಂಗಕ್ಕೆ ಸೇರಿದ ಸುಮಾರು 60 ಕುಟುಂಬಗಳಿಗೆ ಸಾಗುವಳಿಯಾಗಿ ನೀಡಿದ್ದ ಭೂಮಿಯನ್ನು ತಮಿಳುನಾಡು ಮೂಲದ ವ್ಯಕ್ತಿಗಳು ಲಪಟಾಯಿಸಲು ಯತ್ನಿಸಿದ್ದಾರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್ ಅವರಿಗೆ ಮನವಿ ನೀಡಲಾಯಿತು.
ಯಡವನಹಳ್ಳಿ ಗ್ರಾಮದ ಸರ್ವೆ ನಂ.457, 448 ಹಾಗೂ 449 ಈ ಜಮೀನಿನಲ್ಲಿ ಬೋವಿ ಜನಾಂಗದವರು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ ಆದರೆ ಗುತ್ತಿಗೆಗೆ ಪಡೆದ ತಮಿಳುನಾಡು ಮೂಲದ ಕಣ್ಣನ್, ವಾಸುದೇವನ್, ಸುಕುಮಾರನ್ ಎನ್ನುವ ವ್ಯಕ್ತಿಗಳು ಕೊಳವೆಬಾವಿ, ಬ್ಯಾಂಕ್ ಸಾಲ ಕೊಡಿಸುತ್ತೇವೆ ಎಂದು ವಂಚಿಸಿ ಕಾರ್ಮಿಕರಿಂದ ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಅಲ್ಲದೆ ಜಮೀನಿನ ಆರ್.ಟಿ.ಸಿ ಕೂಡ ಅಕ್ರಮವಾಗಿ ಸೃಷ್ಟಿಸಿಕೊಂಡಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆ ಸರ್ವೆಯರ್ ಅಕ್ರಮವಾಗಿ ಅಳತೆ ಮಾಡಿಸಿ ಕಳ್ಳರಿಗೆ ತಂತಿ ಬೇಲಿ ಹಾಕುವಂತೆ ಜಮೀನನ್ನು ಗುರುತಿಸಿ ಕೊಟ್ಟಿದ್ದಾರೆ.
ತಮಿಳುನಾಡು ಮೂಲದ ಗುತ್ತಿಗೆದಾರರಿಂದ ಪರಿಶಿಷ್ಟ ಜಾತಿ ಭೋವಿ ಜನಾಂಗದವರಿಗೆ ಅನ್ಯಾಯ ಉಂಟಾಗಿದೆ ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ನ್ಯಾಯ ಕೊಡಿಸಿ ಕೊಡಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್ ಮನವಿ ಮಾಡಿದ್ದಾರೆ
ಈ ಸಂದರ್ಭದಲ್ಲಿ ಮುಖಂಡರಾದ ಶಿವಮೂರ್ತಿ, ಜಿ.ಎಂ.ಶಂಕರ್, ಸಿದ್ದರಾಜು, ಸೋಮಶೇಖರ್, ಡ್ಯಾನ್ಸ್ ಬಸವರಾಜು, ಮನುರಾಚಪ್ಪ, ಸೋಮು, ಸಾಗುವಳಿದಾರರಾದ ರಾಣಿಯಮ್ಮ, ಚಿನ್ನಮ್ಮ, ಮಲಯಾತಮ್ಮ, ಕುಮಾರ್, ಸೋಮೇಶ್ ,ಪುಟ್ಟಬುದ್ದಿ, ಮಣಿ, ನಂದಿ ಅಲಗನ್, ಪೆರಿಸ್ವಾಮಿ, ಮಣಿ,ರತ್ನ ಸೇರಿದಂತೆ ಇತರರಿದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8newskannada ಚಾಮರಾಜನಗರ