ವಸತಿಗೃಹದಲ್ಲಿ ನೇಣು ಹಾಕಿಕೊಂಡು ಇಬ್ಬರ ಆತ್ಮಹತ್ಯೆ
ಸಾಗರ: ಇಲ್ಲಿನ ಜೋಗ ರಸ್ತೆಯ ಹಳೆ ಖಾಸಗಿ ಬಸ್ ನಿಲ್ದಾಣದ ಎದುರಿನ ವಸತಿಗೃಹವೊಂದರಲ್ಲಿ ನೇಣು ಹಾಕಿಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬನಹಟ್ಟಿ ಗ್ರಾಮದ ಸಂತೋಷ್ (23), ಹನುಮಂತ (28) ಆತ್ಮಹತ್ಯೆ ಮಾಡಿಕೊಂಡವರು. ಸಂತೋಷ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.
ಸಂತೋಷ್ ಹಾಗೂ ಹನುಮಂತ ಅವರು ಸೆ.24ರಂದು ತಡರಾತ್ರಿ ಇಲ್ಲಿಗೆ ಬಂದು ವಸತಿಗೃಹದಲ್ಲಿ ಕೊಠಡಿ ಪಡೆದಿದ್ದಾರೆ. ಶನಿವಾರ ಮಧ್ಯಾಹ್ನ ಊಟ ಮಾಡಿದ ನಂತರ ಕೊಠಡಿಗೆ ಸೇರಿಕೊಂಡ ಅವರು ನಂತರ ಹೊರಬಂದಿರಲಿಲ್ಲ.
ಭಾನುವಾರ ಬೆಳಿಗ್ಗೆ ವಸತಿಗೃಹದ ಸಿಬ್ಬಂದಿ ಕೊಠಡಿಯ ಬಾಗಿಲು ಬಡಿದರೂ ತೆರೆದಿಲ್ಲ. ಅನುಮಾನಗೊಂಡ ವಸತಿಗೃಹದ ವ್ಯವಸ್ಥಾಪಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಬಂದು ಕೊಠಡಿಯನ್ನು ತೆರೆದಾಗ ಇಬ್ಬರೂ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.