ರಾಜ್ಯ
ರಾಜ್ಯದಲ್ಲಿ 3ನೇ ಅಲೆಯ ಆತಂಕ : ಬೆಂಗಳೂರಿನ ಒಂದೇ ಕಾಲೇಜಿನ ʼ54 ವಿದ್ಯಾರ್ಥಿʼಗಳಿಗೆ ಕೊರೊನಾ ಸೋಂಕು
ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಆರ್ಭಟ ಶುರುವಾಗಿದ್ದು,ನಗರದ ಚೈತನ್ಯ ಇಂಟರ್ ನ್ಯಾಷನಲ್ ಶಾಲೆಯ 54 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದೆ.
ಆನೇಕಲ್ ತಾಲೂಕಿನ ಸಿಂಗೇನಹಾರ ಬಳಿಯ ಈ ಚೈತನ್ಯ ಶಾಲೆಯಲ್ಲಿ ಕರ್ನಾಟಕ, ತಮಿಳುನಾಡು ಮೂಲದ 54 ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದ್ದು, ಇದು ಮೂರನೇ ಅಲೆಯ ಆರಂಭವಾ? ಅನ್ನೋ ಆತಂಕಕ್ಕೆ ಕಾರಣವಾಗಿದೆ.