ಪಾಕಿಸ್ತಾನದಲ್ಲಿ ನಿರುದ್ಯೋಗ : ಸುಳ್ಳುಗಳ ಸಾಮ್ರಾಟ್ ಇಮ್ರಾನ್ ಬಣ್ಣ ಬಯಲು
ಕರಾಚಿ, ಸೆ.28- ಪಾಕಿಸ್ತಾನದಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆ ಇದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೆನ್ನುತಟ್ಟಿಕೊಳ್ಳುತ್ತಿರುವ ನಡುವೆ ಜವಾನನ ಹುದ್ದೆಗೆ 15 ಲಕ್ಷ ಮಂದಿ ಅರ್ಜಿ ಹಾಕಿದ್ದಾರೆ. ಪಾಕಿಸ್ತಾನ ಆರ್ಥಿಕ ಬೆಳವಣಿಗೆ ಸಂಸ್ಥೆ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ.16ರಷ್ಟಿದೆ. ಶೇ.24ರಷ್ಟು ವಿದ್ಯಾವಂತರು ಕೆಲಸವಿಲ್ಲದೆ ಉಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್‍ನಲ್ಲಿ ಖಾಲಿ ಇರುವ ಪಿವನ್ (ಜವಾನ) ಹುದ್ದೆಗೆ ಸುಮಾರು ಒಂದುವರೆ ಮಿಲಿಯನ್ ಜನ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಎಂಫಿಲ್ ಪದವಿ ಪಡೆದವರು ಇದ್ದಾರೆ.
ಆರ್ಥಿಕ ಬೆಳವಣಿಗೆಗಳ ಸಂಸ್ಥೆಯ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ವಿವರಿಸಿರುವಂತೆ ದೇಶದಲ್ಲಿ ಶೇ.40ರಷ್ಟು ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ಸರಿಯಾದ ಉದ್ಯೋಗ ಪಡೆಯಲು ಸಂಘರ್ಷ ನಡೆಸುತ್ತಿರುವ ಬಹಳಷ್ಟು ಮಂದಿ ಎಂಫಿಲ್ ಪದವಿಗೆ ನೋಂದಾವಣಿ ಮಾಡಿಕೊಂಡಿದ್ದಾರೆ.
ಮತ್ತೊಂದು ದುರಂತವೆಂದರೆ ಪಾಕಿಸ್ತಾನದಲ್ಲಿ ಈವರೆಗೂ ನಿರುದ್ಯೋಗದ ಬಗ್ಗೆ ಪಾಕಿಸ್ತಾನದಲ್ಲಿ ಈವರೆಗೂ ಅಧಿಕೃತವಾದ ಯಾವ ಸಮೀಕ್ಷೆಗಳನ್ನು ಸರ್ಕಾರ ನಡೆಸಿಲ್ಲ. ವಿದೇಶಿ ಸಂಸ್ಥೆಗಳು ಹಾಗೂ ದೇಶದಲ್ಲೇ ಇರುವ ಕೆಲವು ಖಾಸಗಿ ಸಂಸ್ಥೆಗಳು ನಿರುದ್ಯೋಗದ ಪ್ರಮಾಣವನ್ನು ಪ್ರಸ್ತಾಪಿಸುತ್ತಿವೆ ಎನ್ನಲಾಗಿದೆ.
ಪಾಕಿಸ್ತಾನ ಸಾಂಖಿಕ ಮಾನಕ ಸಂಸ್ಥೆ ಪ್ರಕಟಿಸಿರುವ ಮಾಹಿತಿ ಪ್ರಕಾರ 2017-18ರಲ್ಲಿ ನಿರುದ್ಯೋಗದ ಪ್ರಮಾಣ ಶೆ.6.9ರಷ್ಟಿತ್ತು. ಅದರಲ್ಲಿ ಪುರುಷರ ಪ್ರಮಾಣ ಶೇ.5.1ರಿಂದ 5.9ಗೆ ಏರಿಕೆಯಾಗಿದೆ. ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ.8.3ರಿಂದ ಶೇ.10ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.