ನಕಲಿ ಕಲಾಕೃತಿ ಮಾರಾಟ ಮಾಡಿ 10 ಕೋಟಿ ವಂಚನೆ; ಕೇರಳ ಮೂಲದ ಯೂಟ್ಯೂಬರ್ ಮಾವುಂಕಲ್ ಬಂಧನ
ಟಿಪ್ಪು ಸುಲ್ತಾನ ಸಿಂಹಾಸನ, ಔರಂಗಜೇಬನ ಉಂಗುರ ಸೇರಿದಂತೆ ಇತರ ಅಪರೂಪದ ಕಲಾಕೃತಿಗಳು ತನ್ನ ಬಳಿ ಇದೆ ಎಂದು ಯೂಟ್ಯೂಬರ್ ಹೇಳಿಕೊಂಡಿದ್ದರು. ಇದರಿಂದ ಜನರಿಗೆ ಮೋಸ ಮಾಡಿ ಹಣವನ್ನು ತಪಟಾಯಿಸಿದ್ದಾರೆ.
ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ 52 ವರ್ಷದ ಯೂಟ್ಯೂಬರ್ ಮಾನ್ಸನ್ ಮಾವುಂಕಲ್ರನ್ನು ಬಂಧಿಸಲಾಗಿದೆ. ಕೇರಳ ಮೂಲಕ ಯೂಟ್ಯೂಬರ್ ಮಾವುಂಕಲ್, ಕಳೆದ ಹಲವು ವರ್ಷಗಳಿಂದ ಕಲಾಕೃತಿಗಳ ಮತ್ತು ಪುರಾತನ ವಸ್ತುಗಳ ಸಂಗ್ರಹಿಸುತ್ತಿದ್ದಂತೆ ನಟಿಸುತ್ತ ಜನರಿಗೆ 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಪ್ಪು ಸುಲ್ತಾನ ಸಿಂಹಾಸನ, ಔರಂಗಜೇಬನ ಉಂಗುರ ಸೇರಿದಂತೆ ಇತರ ಅಪರೂಪದ ಕಲಾಕೃತಿಗಳು ತನ್ನ ಬಳಿ ಇದೆ ಎಂದು ಯೂಟ್ಯೂಬರ್ ಹೇಳಿಕೊಂಡಿದ್ದರು. ಇದರಿಂದ ಜನರಿಗೆ ಮೋಸ ಮಾಡಿ ಹಣವನ್ನು ತಪಟಾಯಿಸಿದ್ದಾರೆ.
ಗಲ್ಫ್ ದೇಶಗಳಲ್ಲಿ ರಾಜಮನೆತನದವರು ತಾವು ಮಾರಿದ ಕಲಾಕೃತಿಳಿಗೆ ನೀಡಿದ ಹಣ ಅದು ಬ್ಯಾಂಕ್ನಲ್ಲಿದೆ, ವಿದೇಶಿ ಬ್ಯಾಂಕ್ ಖಾತೆಯಲ್ಲಿ ಸಿಲುಕೊಂಡಿವೆ ಎಂದು ಜನರನ್ನು ನಂಬಿಸಿದ್ದರು. ಕೊಚ್ಚಿಯಲ್ಲಿರುವ ಯೂಟ್ಯೂಬರ್ ಬಾಡಿಗೆ ಮನೆಯಲ್ಲಿ ಅವರ ಬಳಿಯಿದ್ದ ಬಹುತೇಕ ಕಲಾಕೃತಿಗಳು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ನಕಲಿ ಉತ್ಪನ್ನಗಳು ಎಂಬ ವಿಷಯ ಬೆಳಕಿಗೆ ಬಂದಿದೆ.