ಚಪ್ಪಲಿಯೊಳಗೆ ಬ್ಲ್ಯೂಟೂತ್ ಹಾಗೂ ಮೊಬೈಲ್ ಫೋನ್ ಇಟ್ಟುಕೊಂಡು ಪರೀಕ್ಷೆ ಬರೆಯಲು ಮುಂದಾದ ಐವರ ಬಂಧನ!
: ಚೀಟಿಂಗ್ ಮಾಡಲು ಬಳಕೆ ಮಾಡಲಾಗುತ್ತಿದ್ದ ಚಪ್ಪಲಿಗಳನ್ನು ಬರೋಬ್ಬರಿ 2 ರಿಂದ 6 ಲಕ್ಷದ ವರೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ರಾಜಸ್ಥಾನ ಶಿಕ್ಷಕರ ನೇಮಕಾತಿ ಪರೀಕ್ಷೆಯ (REET) ವೇಳೆ ಅಭ್ಯರ್ಥಿಗಳು ಚಪ್ಪಲಿಯೊಳಗೆ ಬ್ಲೂಟೂತ್ ಹಾಗೂ ಮೊಬೈಲ್ ಫೋನ್ ಅಡಗಿಸಿಟ್ಟುಕೊಂಡು ಚೀಟ್ ಮಾಡುತ್ತಿದ್ದ ವಿಷಯವೊಂದು ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮೋಸ ಮಾಡಲು ಮುಂದಾದ ಅಭ್ಯರ್ಥಿಗಳಿಂದ ಒಟ್ಟು 6 ಲಕ್ಷ ಮೌಲ್ಯದ ಚಪ್ಪಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಚಪ್ಪಲಿಯೊಳಗೆ ಬ್ಲ್ಯೂಟೂತ್ ಮತ್ತು ಮೊಬೈಲ್ ಫೊನ್ಗಳನ್ನು ಇರಿಸಿಕೊಳ್ಳಲಾಗಿತ್ತು. ಜತೆಗೆ ಅಭ್ಯರ್ಥಿಗಳು ಬ್ಲ್ಯೂಟೂತ್ ಸಹಾಯದಿಂದ ಉತ್ತರವನ್ನು ಹೊರಗಡೆ ನಿಂತಿದ್ದ ವ್ಯಕ್ತಿಯಿಂದ ಕೇಳಿ ತಿಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದರು.
ರಾಜಸ್ಥಾನ ಶಿಕ್ಷಕರ ಅರ್ಹತಾ ನೇಮಕಾತಿ ಪರೀಕ್ಷೆಯು ಭಾನುವಾರ ನಡೆಯಿತು. ರಾಜಸ್ಥಾನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು REET ಉತ್ತೀರ್ಣರಾಗಬೇಕು. ಐವರು ಅಭ್ಯರ್ಥಿಗಳು ಬ್ಲ್ಯೂಟೂತ್ ಇದ್ದ ಚಪ್ಪಲಿಯನ್ನು ಧರಿಸಿ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮೊದಲೇ ಅವರನ್ನು ತಡೆಯಲಾಗಿದೆ. ಜತೆಗೆ ಈ ದಂಧೆಯಲ್ಲಿ ಪಾಲ್ಗೊಂಡಿದ್ದ ಇತರರನ್ನೂ ಸಹ ಬಂಧಿಸಲಾಗಿದೆ. ಚೀಟಿಂಗ್ ಮಾಡಲು ಬಳಕೆ ಮಾಡಲಾಗುತ್ತಿದ್ದ ಚಪ್ಪಲಿಗಳನ್ನು ಬರೋಬ್ಬರಿ 2 ರಿಂದ 6 ಲಕ್ಷದ ವರೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.