ಇತ್ತೀಚಿನ ಸುದ್ದಿ
ಅಂತರಾಷ್ಟ್ರೀಯ ಮಟ್ಟದ ನೋಬೆಲ್ ವರ್ಡ್ ರೆಕಾರ್ಡ್ಸ್ ಪ್ರಶಸ್ತಿಗೆ ಅಕ್ಷರ ವೇದ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಧೀಶ್ನು ಪಠವಾರಿ ಆಯ್ಕೆ

ಮಸ್ಕಿ: ಅಲ್ಪ ಸಮಯದಲ್ಲಿ ತನ್ನ ಪ್ರತಿಭೆಯನ್ನು ತೋರಿಸುವ ಮುಖಾಂತರ 4 ವರ್ಷದ ಮಗುವೊಂದು ಅಂತರಾಷ್ಟ್ರೀಯ ಮಟ್ಟದ ನೋಬೆಲ್ ವರ್ಡ್ ರೆಕಾರ್ಡ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪಟ್ಟಣದ ಅಕ್ಷರ ವೇದ್ಯ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕು ವರ್ಷದ ವಿದ್ಯಾರ್ಥಿನಿಯಾದ ಕುಮಾರಿ ಸುಧೀಶ್ನು ಪಠವಾರಿ ತಂದೆ ಪ್ರಸನ್ನ ಪಠವಾರಿ ಇವರು ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಗೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿನಿಗೆ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಇವರಿಂದ ನೊಬೆಲ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.

ತಮ್ಮ ಶಾಲೆಯ ವಿದ್ಯಾರ್ಥಿನಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದ್ದಕ್ಕಾಗಿ ಅಕ್ಷರ ವೇದ್ಯಾ ಶಾಲೆಯ ಮುಖ್ಯಸ್ಥ ವಿನೋದ್ ಕುಮಾರ ದೇಶಮುಖ್, ಪ್ರಶಂಸೆ ವ್ಯಕ್ತಪಸಿದರು. ಈ ಸಂದರ್ಭದಲ್ಲಿ ಅಕ್ಷರ ವೇದ್ಯಾ ಟ್ರಸ್ಟ್ ನ ಪದಾಧಿಕಾರಿಗಳಾದ ಬಾಲಾಜಿ ಸಿಂಗ್ ಠಾಕೂರ್, ಪವನ್ ಸಿಂಗ್ ಠಾಕೂರ್ ಸೇರಿದಂತೆ ಶಿಕ್ಷಕರು
ಉಪಸ್ಥಿತರಿದ್ದರು.