ಚೆಕ್ ಡ್ಯಾಂ ನಿರ್ಮಾಣದಿಂದ ಅಂತರ್ಜಲ ವೃದ್ಧಿಯಾಗಲಿದೆ: ಕೆ.ಎಚ್.ಮುನಿಯಪ್ಪ

2 ಕೋಟಿ ವೆಚ್ಚದಲ್ಲಿ 5 ಚೆಕ್ ಡ್ಯಾಂ ನಿರ್ಮಾಣಕ್ಕೆ ಭೂಮಿಪೂಜೆ
ದೇವನಹಳ್ಳಿ : ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುವುದರಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ಉತ್ತಮ ನೀರು ದೊರೆಯುವುದರ ಜೊತೆಗೆ ಪ್ರಾಣಿಪಕ್ಷಿಗಳಿಗೂ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಮಾಳಿಗೇನಹಳ್ಳಿಯಲ್ಲಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು 2024-2025ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 2 ಕೋಟಿ ವೆಚ್ಚದಲ್ಲಿ 5 ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಬಿಸಿದ್ದೇವೆ. ಇದರಿಂದ ಅಂರ್ತರ್ಜಲ ಅಭಿವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ. ಎಲ್ಲೆಲ್ಲಿ ಕಾಲುವೆಗಳಿಗೆ ಅಲ್ಲಿ ಚೆಕ್ ಡ್ಯಾಂಗಳನ್ನು ಕಟ್ಟುವುದರಿಂದ ಕೆರಗಳಷ್ಟೆ ಪ್ರಯೋಜನ ಚೆಕ್ಡ್ಯಾಂಗಳಿAದ ಆಗಲಿದೆ. ದೇವನಹಳ್ಳಿಯಿಂದ ಹೊಸಕೋಟೆ ಕೆರೆಗೆ ನೀರು ಹರಿದು ದಕ್ಷಿಣ ಪಿನಾಕಿನಿ ಸೇರಲಿದೆ. ಜಿಲ್ಲೆಯಾದ್ಯಂತ ಎಲ್ಲಾ ಕಡೆ ಚೆಕ್ಡ್ಯಾಂ ನಿರ್ಮಾಣ ಮಾಡಬೇಕೆದ್ದು ಹಂತಹAತವಾಗಿ ಮಾಡಲಾಗುವುದು. ರೈತರ ಅನುಕೂಲಕ್ಕಾಗಿ ಎಚ್.ಎನ್.ವ್ಯಾಲಿ ನೀರು ಈಗಾಗಲೇ ಕೆರೆಗಳಿಗೆ ಹರಿಯುತ್ತಿದೆ. ಅದರ ಜೊತೆಗೆ ವೃಷಭಾವತಿ ನೀರು ನಾಲ್ಕು ತಾಲೂಕುಗಳಿಗೆ ಬರುವುದರಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಮಳೆಗಾಲದಲ್ಲಿ ಬಂದ ನೀರನ್ನು ಶೇಖರಣೆ ಮಾಡಲು ಎಲ್ಲೆಲ್ಲಿ ಕಾಲುವೆಗಳಿವೆ ಅಲ್ಲಿ ಸಣ್ಣನೀರಾವರಿ ಇಲಾಖೆಯಿಂದ ಚೆಕ್ ಡ್ಯಾಂ ನಿರ್ಮಾಣ ಮಾಡುವುದರಿಂದ ಮತ್ತಷ್ಟು ಪ್ರಯೋಜನವಾಗಲಿದೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ರೈತರ ಪರವಾಗಿ ಹೆಚ್ಚು ಒತ್ತು ನೀಡಿ ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಜಿಲ್ಲೆಗೆ ಮತ್ತಷ್ಟು ಚೆಕ್ ಡ್ಯಾಂಗಳ ಅವಶ್ಯಕತೆ ಇದ್ದು ಅದನ್ನು ನೀಡುವ ಭರವಸೆ ನೀಡಿದ್ದಾರೆ ಎಂದರು.
ಎಲ್ಲೆಲ್ಲಿ ಚೆಕ್ ಡ್ಯಾಂ ನಿರ್ಮಾಣ: ಮಾಳಿಗೇನಹಳ್ಳಿ, ಮಾಯಸಂದ್ರ, ವೆಂಕಟನಹಳ್ಳಿ, ಬೆಟ್ಟಕೋಟೆ, ವಿಜಯಪುರ
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಸವಣ್ಣನವರ ಹೇಳಿಕೆಗೆ ಪ್ರತಿಕ್ರಿಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ ಜಗಜ್ಯೋತಿ ಬಸವಣ್ಣನವರು ಸಮಾಜದಲ್ಲಿ ಕ್ರಾಂತಿಕಾರಿ ಕಾರ್ಯಕ್ರಮ ಮಾಡಿದ್ದಾರೆ. ಸಮಾಜದಲ್ಲಿ ಸಮಾನತೆಯನ್ನು ತರಲಿಕ್ಕೆ 12ನೇ ಶತಮಾನದಲ್ಲಿ ಒಬ್ಬ ಮಹಾನ್ ವ್ಯಕ್ತಿ ಕ್ರಾಂತಿಕಾರಿ ಕೆಲಸದ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಸರಕಾರಗಳು ಮಾಡಲಿಕ್ಕಾಗದ ಕೆಲಸಗಳನ್ನು ಅನುಭವ ಮಂಟಪದ ಮೂಲಕ ಬಸವಣ್ಣನವರು ಮಾಡಿದ್ದಾರೆ ಅದಕ್ಕೆ ಅಲ್ಲಮಪ್ರಭುಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಮಾನತೆ ತರಲು ಶ್ರಮಿಸಿದ್ದಾರೆ ಎಂದರು.
ಇದೆ ವೇಳೆ ಬಯಪ ಅಧ್ಯಕ್ಷ ಶಾಂತಕುಮಾರ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸನ್ನಕುಮಾರ್, ಬಿದಲೂರು ಗ್ರಾಪಂ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ಪಿ.ಮುನಿರಾಜು, ಸದಸ್ಯರಾದ ಪ್ರಕಾಶ್, ನಾಗೇಗೌಡ, ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಸಹಕಾರಿ ಬ್ಯಾಂಕ್ನ ನಿರ್ದೇಶಕ ರಮೇಶ್, ಆವತಿ ಗ್ರಾಪಂ ಅಧ್ಯಕ್ಷೆ ಮುನಿರತ್ನಮ್ಮ ಸದಸ್ಯರಾದ ನರಸಪ್ಪ, ಕಾಂಗ್ರೇಸ್ ಕಸಬಾ ಹೋಬಳಿ ಅಧ್ಯಕ್ಷ ಗೋಪಾಲಕೃಷ್ಣ,ಪುರಸಭಾ ಸದಸ್ಯ ಮುನಿಕೃಷ್ಣ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಾಧಾರೆಡ್ಡಿ, ಕೆ.ನಾಗರಾಜು, ಉಮೇಶ್, ಶ್ರೀನಿವಾಸ್, ಎ.ಮುನಿಯಪ್ಪ, ದೇವರಾಜ್, ಆಂಜಿನಪ್ಪ, ಅಪ್ಪಾಜಪ್ಪ, ಮುಂತಾದವರು ಇದ್ದರು.