ಸಿನಿಮಾ
ಹೊಸ ಸಿನಿಮಾಗಾಗಿ ದಿಲ್ ರಾಜು- ವಂಶಿ ಪೈಡಿಪಲ್ಲಿ ಜತೆ ಕೂ ಜೋಡಿಸಿದ ನಟ Vijay
ವಿಜಯ್ ಅವರ ಹುಟ್ಟುಹಬ್ಬದಂದು ಅವರ ಅಭಿನಯದ 65ನೇ ಸಿನಿಮಾ ಬೀಸ್ಟ್ ಪೋಸ್ಟರ್ ರಿಲೀಸ್ ಆಗಿತ್ತು. ದಳಪತಿ ಅಭಿಮಾನಿಗಳು ಪೋಸ್ಟರ್ ನೋಡಿ ಸಿಕ್ಕಾಪಟ್ಟೆ ಖುಷಿಯಲ್ಲಿದ್ದರು. ಈಗ ವಿಜಯ್ ಅವರ ಫ್ಯಾನ್ಸ್ಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ.

ಹೌದು, ಕಾಲಿವುಡ್ ನಟ ವಿಜಯ್ ಅಭಿನಯದ 66ನೇ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರಕ್ಕಾಗಿ ವಿಜಯ್ ಅವರು ಸ್ಟಾರ್ ನಿರ್ಮಾಪಕ ದಿಲ್ ರಾಜು ಹಾಗೂ ಟಾಲಿವುಡ್ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಕೈ ಜೋಡಿಸಿದ್ದಾರೆ.
ವಿಜಯ್ ಅಭಿನಯದ 66ನೇ ಸಿನಿಮಾ ಕುರಿತಾದ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.