ಡಾಲಿ ಧನಂಜಯ ಅಭಿನಯದ Rathnan Prapancha ಸಿನಿಮಾ ಒಟಿಟಿಯಲ್ಲಿ ರಿಲೀಸ್..!
ಸ್ಯಾಂಡಲ್ವುಡ್ನಲ್ಲಿ ನಾಯಕನಾಗಿ ನಟಿಸಿದರೂ ಈ ನಟನಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ವಿಲನ್ ಪಾತ್ರ. ಹೀಗಾಗಿಯೇ ಆ ಪಾತ್ರದ ಹೆಸರಿನಿಂದಲೇ ತುಂಬಾ ಜನರು ಇವರನ್ನು ಗುರುತಿಸುತ್ತಾರೆ. ಅವರೇ ಡಾಲಿ ಧನಂಜಯ್ (Dhananjaya). ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಒಂದರ ಹಿಂದೆ ಒಂದು ಸಿನಿಮಾ ರಿಲೀಸ್ಗೆ ಸಜ್ಜಾಗುತ್ತಿದೆ.
ಹೀಗಿರುವಾಗಲೇ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರತ್ನನ್ ಪ್ರಪಂಚ’ (Rathnan Prapancha) ರಿಲೀಸ್ ದಿನಾಂಕ ಪ್ರಕಟವಾಗಿದೆ. ಒಂದು ಕಡೆ ಅಭಿಮಾನಿಗಳಿಗೆ ಖುಷಿಯ ವಿಷಯವಾದರೂ ಈ ವಿಷಯ ಕೊಂಚ ಅಚ್ಚರಿ ಮೂಡಿಸಿದೆ. ಹೌದು, ಅದಕ್ಕೂ ಕಾರಣವಿದೆ. ಡಾಲಿ ಧನಂಜಯ್ ಅವರು ಈ ಸಿನಿಮಾ ಚಿತ್ರಮಂದಿರದ ಬದಲಾಗಿ ಒಟಿಟಿಯಲ್ಲಿ ತೆರೆ ಕಾಣಲಿದೆ.
ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ರತ್ನನ್ ಪ್ರಪಂಚ’ ಚಿತ್ರದ ಟ್ರೇಲರ್, ಪೋಸ್ಟರ್ಗಳು ರಿಲೀಸ್ ಆಗಿದ್ದು, ಸಿನಿಮಾದ ಬಗೆಗಿನ ಕುತೂಹಲ ಹೆಚ್ಚಿಸಿತ್ತು. ಈಗ ಈ ಸಿನಿಮಾ ಇದೇ ತಿಂಗಳ 22ರಂದು ಒಟಿಟಿ ಮೂಲಕ ರಿಲೀಸ್ ಆಗಲಿದೆ. ಈ ವಿಷಯವನ್ನು ನಟ ಡಾಲಿ ಧನಂಜಯ್ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.