ಬರ್ತ್ ಡೇ ಗೆ ಮಹಿಳಾ ಪೇದೆಯನ್ನ ಆಹ್ವಾನಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಕಾಮುಕರು
ಬರ್ತ್ ಡೇ ಗೆ ಮಹಿಳಾ ಪೇದೆಯನ್ನ ಆಹ್ವಾನಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಕಾಮುಕರು
ಮಧ್ಯಪ್ರದೇಶ : ಸಾಮನ್ಯ ಜನರನ್ನ ರಕ್ಷಿಸಬೇಕಾಗಿರುವ ಪೊಲೀಸರಿಗೆ ಸಮಾಜದಲ್ಲಿ ಸುರಕ್ಷತೆಯಿಲ್ಲದೇ ಹೋದಮೇಲೆ ನಾಗರಿಕರ ಕಥೆಯೇನು ಎಂಬಂತಾಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶ , ಮಧ್ಯಪ್ರದೇಶ, ಬಿಹಾರ , ರಾಜಸ್ಥಾನದಲ್ಲಂತೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಎಲ್ಲೆ ಮೀರಿವೆ.
ಇದೀಗ ಮಹಿಳಾ ಪೇದೆಯ ಮೇಲೆಯೂ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ. ಮೂವರು ಕಾಮುಕರು ಮಹಿಳಾ ಪೇದೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ವಿಡಿಯೋ ಮಾಡಿ, ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಸಂತ್ರಸ್ತ ಮಹಿಳಾ ಪೇದೆ ಸೆಪ್ಟೆಂಬರ್ 13 ರಂದು ಈ ಬಗ್ಗೆ ದೂರು ದಾಖಲಿಸಿದ್ದಾರೆ. ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿಯ ತಾಯಿಯ ಮೇಲೆಯೂ ದೂರು ದಾಖಲಾಗಿದೆ.
ಪ್ರಮುಖ ಆರೋಪಿ, ಆತನ ಸಹೋದರ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಒಟ್ಟು ಮೂವರು ಬರ್ತಡೇ ಪಾರ್ಟಿಗೆ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ರನ್ನ ಆಹ್ವಾನಿಸಿದ್ದಾರೆ. ಇವರನ್ನ ನಂಬಿ ಹೋದ ಪೇದೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತ ಮಹಿಳಾ ಪೇದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ದೇ ಪ್ರಮುಖ ಆರೋಪಿಯ ತಾಯಿ ಮತ್ತು ಅವರ ಸಂಬಂಧಿ ಕೊಲೆ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಿದದ್ದಾರೆ. ಅಷ್ಟೇ ಅಲ್ದೇ ಹಣ ಕೂಡ ದೋಚಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಫೇಸ್ಬುಕ್ ಮೂಲಕ ಸಂತ್ರಸ್ತ ಮಹಿಳಾ ಪೇದೆಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಕಳೆದ ಏಪ್ರಿಲ್ ನಿಂದ ವಾಟ್ಸ್ಆಯಪ್ ಮೂಲಕ ಇಬ್ಬರೂ ಚಾಟ್ ಮಾಡ್ತಿದ್ದರು. ನಂತರ ಪರಿಚಯ ಗಾಢವಾಗಿದ್ದು, ತಮ್ಮನ ಬರ್ತಡೇ ಆಚರಿಸುವ ನೆಪದಲ್ಲಿ ಮಹಿಳಾ ಪೇದೆಯನ್ನು ಕರೆಸಿಕೊಂಡು ಮೂವರು ಸೇರಿ ಗ್ಯಾಂಗ್ ರೇಪ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣದ ಪ್ರಮುಖ ಆರೋಪಿ ಮತ್ತು ಆತನ ತಾಯಿಯನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ.