ತರಬೇತಿ ಕಾಲೇಜಿನಲ್ಲಿ ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರ; ವಾಯುಪಡೆ ಅಧಿಕಾರಿ ಬಂಧನ
ನವದೆಹಲಿ: ಕೊಯಂಬತ್ತೂರು ತರಬೇತಿ ಕಾಲೇಜಿನಲ್ಲಿ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ಬಂಧಿಸಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ದೇಶದ ವಿವಿಧೆಡೆಯಿಂದ ವಾಯುಪಡೆಗೆ ಆಯ್ಕೆಯಾಗಿದ್ದ 30 ಅಧಿಕಾರಿಗಳು ಆಗಸ್ಟ್ ನಲ್ಲಿ ಕೊಯಂಬತ್ತೂರು ವಾಯುಪಡೆ ಕಾಲೇಜಿಗೆ ತರಬೇತಿಗಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ 29 ವರ್ಷದ ಮಹಿಳಾ ಅಧಿಕಾರಿಯೊಬ್ಬರು ಸೆಪ್ಟೆಂಬರ್ 10ರಂದು ಬಾಸ್ಕೆಟ್ ಬಾಲ್ ಆಡುತ್ತಿದ್ದಾಗ ಕಾಲಿಗೆ ಗಾಯವಾಗಿತ್ತು. ಬಳಿಕ ಆಕೆ ನೋವಿನ ಮಾತ್ರೆಯನ್ನು ತಿಂದು ನಿದ್ದೆ ಶರಣಾಗಿದ್ದರು ಎಂದು ವರದಿ ವಿವರಿಸಿದೆ.
ಮಧ್ಯರಾತ್ರಿ ಎಚ್ಚರವಾದಾಗ ಮಹಿಳಾ ಅಧಿಕಾರಿಗೆ ಶಾಕ್ ಆಗಿತ್ತು, ಅದಕ್ಕೆ ಕಾರಣ ಆಕೆ ನಗ್ನವಾಗಿದ್ದಳು. ಅಷ್ಟೇ ಅಲ್ಲ ಆಕೆಯ ಪಕ್ಕದಲ್ಲಿ ಆರೋಪಿ ಅಧಿಕಾರಿ ಕೂಡಾ ನಗ್ನವಾಗಿ ಮಲಗಿದ್ದ ಎಂದು ವರದಿ ತಿಳಿಸಿದೆ.
ಅಧಿಕಾರಿ ಅತ್ಯಾಚಾರ ಎಸಗಿದ್ದ ಬಗ್ಗೆ ಮಹಿಳಾ ಅಧಿಕಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲವಾಗಿತ್ತು. ನಂತರ ಆಕೆ ಕೊಯಂಬತ್ತೂರು ನಗರ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದು, ಬಳಿಕ ಗಾಂಧಿಪುರಂ ಆಲ್ ವುಮೆನ್ ಪೊಲೀಸ್ ಠಾಣೆ ತನಿಖೆ ಕೈಗೆತ್ತಿಕೊಂಡು, ಆರೋಪಿ ಅಧಿಕಾರಿಯನ್ನು ಬಂಧಿಸಲಾಗಿತ್ತು ಎಂದು ವರದಿ ಹೇಳಿದೆ.