ಕೃಷಿ ಕಾಯ್ದೆ- ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಏನಿದೆ ಪರಿಸ್ಥಿತಿ? ಇಲ್ಲಿದೆ ವಿವರ
ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಯ ವಿರುದ್ಧ ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಯಾರಿಗೂ ತೊಂದರೆ ಮಾಡದೆ ಪ್ರತಿಭಟನೆ ನಡೆಸಿ ಅಂತಾ ರಾಜ್ಯ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ.
ಬೆಂಗಳೂರು: ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರೋಧಿಸಿ ಇಂದು ( ಸೆಪ್ಟೆಂಬರ್ 27) ರೈತರು ಬಂದ್ಗೆ ಮುಂದಾಗಿದ್ದು ಸಿಲಿಕಾನ್ ಸಿಟಿಯ 4 ಭಾಗಗಳಿಂದ ಇಂದು ಪ್ರತಿಭಟನಾ ಱಲಿ ಆರಂಭವಾಗಿದೆ. ಹೀಗಾಗಿ ಬೆಂಗಳೂರಿಗರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆದರೆ ಬೆಂಗಳೂರಿನಲ್ಲಿ ಬಸ್ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಇನ್ನು ಮಾರುಕಟ್ಟೆ, ಹೋಟೆಲ್, ಅಂಗಡಿಗಳು ಓಪನ್ ಆಗಿವೆ. ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಯ ವಿರುದ್ಧ ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಯಾರಿಗೂ ತೊಂದರೆ ಮಾಡದೆ ಪ್ರತಿಭಟನೆ ನಡೆಸಿ ಅಂತಾ ರಾಜ್ಯ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ. ಇಷ್ಟಾದರೂ ಇವತ್ತು ಹೆದ್ದಾರಿ ತಡೆ, ಱಲಿಯಿಂದಾಗಿ ಟ್ರಾಫಿಕ್ ಕಿರಿಕಿರಿ ಎದುರಾಗಲಿದೆ. ಸಾಮಾನ್ಯ ದಿನಗಳಲ್ಲೇ ಟ್ರಾಫಿಕ್ನಲ್ಲಿ ಸಿಲುಕಿ ಒದ್ದಾಡುವ ಬೆಂಗಳೂರಿಗರಿಗೆ ವಾರದ ಆರಂಭದಲ್ಲೇ ಕಿರಿಕಿರಿ ಎದುರಾಗಲಿದೆ.