ಸ್ಯಾಮ್-ನಾಗ್ ದಾಂಪತ್ಯ ಕಲಹ: 50 ಕೋಟಿ ಪರಿಹಾರ, ಅಕ್ಟೋಬರ್ 7ಕ್ಕೆ ಘೋಷಣೆ!
ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ. ಇವರಿಬ್ಬರ ದಾಂಪತ್ಯದಲ್ಲಿ ಕಲಹ ಉಂಟಾಗಿದ್ದು, ಡಿವೋರ್ಸ್ ಪಡೆಯುವ ಹಾದಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ನಿಜಕ್ಕೂ ಅಘಾತ ತಂದಿದ್ದು, ಏನಾಯ್ತು ಈ ಜೋಡಿಗೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾರೆ.
ಒಂದು ಸಮಯದಲ್ಲಿ ಈ ಇಬ್ಬರನ್ನು ನೋಡಿ, ‘ವಾಹ್ ಎಂತಹ ಜೋಡಿ’ ಎಂದು ಮಾತನಾಡಿಕೊಳ್ಳುತ್ತಿದ್ದವರು ಈಗ ಅವರ ದಾಂಪತ್ಯದ ಸುದ್ದಿ ಕೇಳಿ ‘ಹೌದಾ’ ಎಂದು ಅಚ್ಚರಿಯಿಂದ ನೋಡುವಂತಾಗಿದೆ. ಕಳೆದ ಹಲವು ದಿನಗಳಿಂದ ನಾಗ್ ಮತ್ತು ಸ್ಯಾಮ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸಮಂತಾ ಒಂಟಿಯಾಗಿ ತನ್ನ ಸ್ನೇಹಿತರ ಜೊತೆ ಸುತ್ತಾಡುತ್ತಿದ್ದಾರೆ. ಆ ಕಡೆ ನಾಗಚೈತನ್ಯ ತಮ್ಮ ಸಿನಿಮಾ ಹಾಗೂ ಇನ್ನಿತರ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಇದೆಲ್ಲವೂ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿರುವುದನ್ನು ಸತ್ಯ ಎಂದು ಹೇಳುತ್ತಿದೆ.
ಈ ಬಗ್ಗೆ ಸಮಂತಾ ಅಥವಾ ನಾಗಚೈತನ್ಯ ಯಾರೊಬ್ಬರು ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಸಮಂತಾ ಮಾತ್ರ ಪರೋಕ್ಷವಾಗಿ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎಂದೆನಿಸುತ್ತಿದೆ. ಟ್ವಿಟ್ಟರ್‌ನಲ್ಲಿ ಸರ್‌ನೇಮ್ ತೆಗೆದು ಹಾಕಿದರು. ‘ಅಕ್ಕಿನೇನಿ’ ಹೆಸರು ತೆಗೆದು ‘ಎಸ್’ ಎಂದು ಉಳಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ನಾಗಾರ್ಜುನ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಇತ್ತು. ಈ ಕಾರ್ಯಕ್ರಮದಲ್ಲಿಯೂ ಸ್ಯಾಮ್ ಪಾಲ್ಗೊಂಡಿಲ್ಲ.
ಟಾಲಿವುಡ್‌ನ ಹಲವು ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ ಸಮಂತಾ ಮತ್ತು ನಾಗ್ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಸಮಂತಾ ದೊಡ್ಡ ಮೊತ್ತವನ್ನು ಪರಿಹಾರವಾಗಿ ಕೇಳುತ್ತಿದ್ದಾರೆ ಎನ್ನಲಾಗಿದೆ.