ಕ್ರೈಂ
‘ಪಂಜಾಬ್’ನಲ್ಲಿ ಶಂಕಿತ ಮೂವರು ಉಗ್ರರು ಅರೆಸ್ಟ್ : ಹಲವು ಸ್ಪೋಟಕ, ಶಸ್ತ್ರಾಸ್ತಗಳ ವಶ
ಅಮೃತಸರ : ಭಾರಿ ಬೆಳವಣಿಗೆಯೊಂದರಲ್ಲಿ ಪಂಜಾಬ್ ಪೊಲೀಸರು ರಾಜ್ಯದ ತರ್ನ್ ತರನ್ ಜಿಲ್ಲೆಯಲ್ಲಿ ನಡೆದ ದೊಡ್ಡ ಭಯೋತ್ಪಾದಕ ದಾಳಿಯ ಪ್ರಯತ್ನವನ್ನು ತಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಅಲ್ಲದೇ ಬಂಧಿತರಿಂದ ಸ್ಪೋಟಕ, ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬುಧವಾರ ತಡವಾಗಿ, ತರ್ನ್ ತರನ್ ನ ಭಗವಾನ್ ಪುರ ಗ್ರಾಮದ ಬಳಿ ಕಾರಿನಲ್ಲಿ ಬಂದ ಮೂವರು ಹಲ್ಲೆಕೋರರನ್ನು ಸುತ್ತುವರಿದು, ಅವರಿಂದ 9 ಎಂಎಂ ಪಿಸ್ತೂಲ್, 11 ಜೀವಂತ ಕ್ಯಾಟ್ರಿಡ್ಜ್ ಗಳು, ಹ್ಯಾಂಡ್ ಗ್ರೆನೇಡ್ ಮತ್ತು ಇತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಂಕಿತರನ್ನು ಕಮಲ್ ಪ್ರೀತ್ ಸಿಂಗ್ ಮನ್, ಕುಲ್ವಿಂದರ್ ಸಿಂಗ್ ಮತ್ತು ಕನ್ವರ್ ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ರಾಜ್ಯದ ಮೋಗಾ ಜಿಲ್ಲೆಯ ಎಲ್ಲಾ ನಿವಾಸಿಗಳು. ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.