ಸಿನಿಮಾ

ಜಗ್ಗೇಶ್ ಜೊತೆ ಹೊಂಬಾಳೆ 12ನೇ ಸಿನಿಮಾ: ಸಂತೋಷ್ ನಿರ್ದೇಶಕ

ಹೊಂಬಾಳೆ ಫಿಲಂಸ್ ಅಡಿಯಲ್ಲಿ ತಯಾರಾಗಲಿರುವ 12ನೇ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದ್ದು, ನವರಸ ನಾಯಕ ಜಗ್ಗೇಶ್ ಜೊತೆ ಹೊಸ ಚಿತ್ರ ಆರಂಭಿಸಿದ್ದಾರೆ. ಈ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡ್ತಿದ್ದು, ‘ರಾಘವೇಂದ್ರ ಸ್ಟೋರ್ಸ್’ ಎಂದು ಹೆಸರಿಡಲಾಗಿದೆ.

ಈ ಕುರಿತು ಹೊಂಬಾಳೆ ಫಿಲಂಸ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಸಿದ್ದು, ”ಅನ್ನದಾತೋ ಸುಖೀಭವ, ನಮ್ಮ ಮುಂದಿನ ಚಿತ್ರ ನವರಸ ನಾಯಕ ಜಗ್ಗೇಶ್ ಅವರ ಜೊತೆ. ಸಂತೋಷ್ ಆನಂದ್ ರಾಮ್ ನಿರ್ದೇಶಕ. ನವೆಂಬರ್ 22 ರಿಂದ ಚಿತ್ರೀಕರಣ ಅರಂಭ” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಹೊಸ ಚಿತ್ರದ ಬಗ್ಗೆ ನಟ ಜಗ್ಗೇಶ್ ಸಹ ಟ್ವೀಟ್ ಮಾಡಿದ್ದು, ”ನಗಬೇಕು ನಗಿಸಬೇಕು ಇದೆ ನನ್ನ ಧರ್ಮ..ಫುಲ್‌ಮೀಲ್ಸ್ ಹಬ್ಬದೂಟ” ಎಂದಿದ್ದಾರೆ. ಸಂತೋಷ್ ಅನಂದ್ ರಾಮ್ ಕೆಲಸದ ಬಗ್ಗೆ ಬಹಳ ಸಲ ಜಗ್ಗೇಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಅವರ ಜೊತೆಯಲ್ಲಿಯೇ ಸಿನಿಮಾ ಮಾಡ್ತಾರೆ ಎನ್ನುವುದು ಊಹಿಸಿರಲಿಲ್ಲ. ಇದೀಗ, ಈ ಕಾಂಬಿನೇಷನ್‌ನಲ್ಲಿ ಬರಲಿರುವ ‘ರಾಘವೇಂದ್ರ ಸ್ಟೋರ್ಸ್’ ಥ್ರಿಲ್ ಹೆಚ್ಚಿಸಿದೆ. ಮುಂದೆ ಓದಿ…

ರಾಘವೇಂದ್ರ ಸ್ಟೋರ್ಸ್ ಸಿನ್ಸ್ 1972′ ಚಿತ್ರ ಔಟ್ ಅಂಡ್ ಔಟ್ ಕಾಮಿಡಿ ಜಾನರ್ ಎನ್ನುವುದು ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನಲ್ಲೇ ಗೊತ್ತಾಗುತ್ತಿದೆ. ಅದಕ್ಕೆ ಜಗ್ಗೇಶ್ ಅವರು ಹೀರೋ ಅಂದ್ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರಾಜಕುಮಾರ, ಯುವರತ್ನ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನ ಅಂದ್ರೆ ಕುತೂಹಲ ಗಗನಕ್ಕೇರುತ್ತದೆ.
ಹೊಂಬಾಳೆ ಜೊತೆ ಜಗ್ಗೇಶ್ ಮೊದಲ ಚಿತ್ರ

ಅಂದ್ಹಾಗೆ, ಹೊಂಬಾಳೆ ಫಿಲಂಸ್ ಜೊತೆ ಜಗ್ಗೇಶ್ ಅವರದ್ದು ಮೊದಲ ಸಿನಿಮಾ. ಸಂತೋಷ್ ಆನಂದ್ ರಾಮ್ ಅವರದ್ದು ಅಧಿಕೃತವಾಗಿ ಮೂರನೇ ಚಿತ್ರ. ಯುವರತ್ನ ನಂತರ ಮತ್ತೊಮ್ಮೆ ಪುನೀತ್ ರಾಜ್ ಕುಮಾರ್‌ಗೆ ಸಂತೋಷ್ ಆನಂದ್ ಸಿನಿಮಾ ಮಾಡ್ತಿದ್ದು, ಅದಕ್ಕೆ ಹೊಂಬಾಳೆ ಅವರೇ ಬಂಡವಾಳ ಹಾಕಲಿದ್ದಾರೆ. ಈ ಪ್ರಾಜೆಕ್ಟ್ ಆರಂಭವಾಗಲು ಇನ್ನು ಸಮಯಬೇಕಾಗಿದೆ. ಹಾಗಾಗಿ, ಅದಕ್ಕೂ ಮೊದಲು ವಿಭಿನ್ನವಾದ ಪ್ರಯತ್ನಕ್ಕೆ ರಾಜಕುಮಾರ ನಿರ್ದೇಶಕ ಕೈ ಹಾಕಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button