ಸುದ್ದಿ

“ಶಿಕ್ಷಣವನ್ನು ಕೇಸರಿಕರಣದಿಂದ ಉಳಿಸಿ” ಶಿಕ್ಷಣ ತಜ್ಞರಿಗೆ ಎಐಎಸ್‌ಇಸಿ ಕರೆ

ಬೆಂಗಳೂರು: ಶಿಕ್ಷಣ ಇಲಾಖೆ ಶಾಲಾ ಪಠ್ಯದಲ್ಲಿನ ವಿವಾದಾತ್ಮಕ ವಿಷಯಗಳನ್ನು ಪರಿಷ್ಕರಿಸುವುದಕ್ಕಾಗಿ ಹೊಸ ಸಮಿತಿಯನ್ನು ರಚಿಸಿರುವುದು ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾದ ಅಂಶ.

ಸಮಿತಿಯ ನೇತೃತ್ವ ವಹಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ರೋಹಿತ್ ಚಕ್ರತೀರ್ಥ ಬಿಜೆಪಿ ಬೆಂಬಲಿಗ ಹಾಗೂ ಕರ್ನಾಟಕ ಬಿಜೆಪಿಯ ಬೌದ್ಧಿಕ ಸೆಲ್ ನ ಸದಸ್ಯರಾಗಿರುವುದರಿಂದ ಶಿಕ್ಷಣದ ಕೇಸರಿಕರಣವಾಗಲಿದೆ ಎಂಬುದು ಅಖಿಲ ಭಾರತೀಯ ಶಿಕ್ಷಣ ರಕ್ಷಿಸಿ ಸಮಿತಿ ( ಎಐಎಸ್‌ಇಸಿ)ಯ ಪ್ರಮುಖ ಆರೋಪ

ಈ ಸಮಿತಿ ಸೆ.21 ರಂದು ಶಿಕ್ಷಣ ತಜ್ಞರು, ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಿಕ್ಷಣವನ್ನು ಉಳಿಸುವುದಕ್ಕೆ ಸರ್ಕಾರದ ನಡೆಯ ಬಗ್ಗೆ ಧ್ವನಿ ಎತ್ತುವುದಕ್ಕೆ ಕರೆ ನೀಡಿದೆ.

ಸರ್ಕಾರದ ನಡೆಯಿಂದಾಗಿ ಶಿಕ್ಷಣದಲ್ಲಿ ವೈಜ್ಞಾನಿಕ ಮನೋಭಾವ, ಪ್ರಜಾಪ್ರಭುತ್ವ ಮೌಲ್ಯಗಳು ಅಳಿಯಲಿವೆ ಎಂದು ಎಐಎಸ್‌ಇಸಿ ಆರೋಪಿಸಿದೆ.

ಡಾ. ರಾಜಾರಾಮ್ ಹೆಗ್ಡೆ, ಕುವೆಂಪು ವಿವಿಯ ಇತಿಹಾಸ ವಿಭಾಗ, ವಿಷಯ ತಜ್ಞರು ಸೇರಿದಂತೆ 15 ಸದಸ್ಯರ ಈ ಸಮಿತಿ ಪ್ರೊ.ಜಿ.ಎಸ್‌.ಮುಡಂಬಡಿತ್ತಾಯ ಪಠ್ಯ ಸಮಿತಿ (2015)ಯ ಹಾಗೂ 2017 ರ ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯ ಸದಸ್ಯರು ಪಠ್ಯದಲ್ಲಿನ ತಪ್ಪುಗಳನ್ನು ಪರಿಷ್ಕರಣೆ ಮಾಡಲಿದೆ ಎಂದು ರೋಹಿತ್ ಚಕ್ರತೀರ್ಥ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸಮಿತಿಗೆ ಅಂತಿಮ ವರದಿ ಸಲ್ಲಿಸುವುದಕ್ಕೆ ಅಕ್ಟೋಬರ್ ವರೆಗೂ ಗಡುವನ್ನು ನೀಡಲಾಗಿದ್ದು ಹೊಸ ಸಮಿತಿಯ ಮೊದಲ ಸಭೆ ಇನ್ನಷ್ಟೇ ನಡೆಯಬೇಕಿದೆ. ಬಹುಶಃ ಮುಂದಿನ ವಾರದಲ್ಲಿ ಸಮಿತಿಯ ಸಭೆ ನಡೆಯಬಹುದು ಎಂದು ರೋಹಿತ್ ಚಕ್ರತೀರ್ಥ ತಿಳಿಸಿದ್ದಾರೆ.

ವಾಸ್ತವದಿಂದ ವ್ಯತ್ಯಾಸವಾಗಿರುವ ಅಂಶಗಳನ್ನು ಸರಿಪಡಿಸಲಾಗುತ್ತದೆ. ಬರಗೂರು ರಾಮಚಂದ್ರಪ್ಪನವರ ಸಮಿತಿಯ 2017 ರ ಪರಿಷ್ಕರಣೆಯಷ್ಟೇ ಅಲ್ಲದೇ 2015 ರ ಅವಧಿಯ ಪ್ರೊ.ಜಿ.ಎಸ್‌.ಮುಡಂಬಡಿತ್ತಾಯ ಸಮಿತಿಯ ಪಠ್ಯಗಳಲ್ಲಿ ತಪ್ಪಾಗಿರುವ ಅಂಶಗಳನ್ನು, ಎಡವಿರಲಿ, ಬಲವಿರಲಿ ಸೈದ್ಧಾಂತಿಕ ಒಲವು ಹೊಂದಿರುವ ಅಂಶಗಳನ್ನು ಸರಿಪಡಿಸಲಾಗುವುದು ಅಂತಿಮ ಶಿಫಾರಸ್ಸುಗಳನ್ನು ರಾಜ್ಯ ಪಠ್ಯ ಸೊಸೈಟಿಗೆ ಅನುಮೋದನೆಗಗಾಗಿ ಕಳಿಸಲಾಗುವುದು ಎಂದು ರೋಹಿತ್ ಮಾಹಿತಿ ನೀಡಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯ ಪರಿಷ್ಕರಣೆ ಹೆಚ್ಚು ಪ್ರಜಾಪ್ರಭುತ್ವ ಮತ್ತು ವೈಜ್ಞಾನಿಕವಾಗಿ ಮಾಡಲಾಗಿತ್ತು. ಯಾವುದೇ ರಾಜಕೀಯ ಸಿದ್ಧಾಂತವನ್ನೂ ಉತ್ತೇಜಿಸಿರಲಿಲ್ಲ ಎಂದು ಎಐಎಸ್‌ಇಸಿ ಹೇಳಿದೆ

Related Articles

Leave a Reply

Your email address will not be published. Required fields are marked *

Back to top button