ಕ್ರೀಡೆ

ಒಂದೇ ದಿನದಲ್ಲಿ ಖೋ ಖೋ ವಿಶ್ವಕಪ್ ಗೆದ್ದ ಭಾರತ ಪುರುಷ ತಂಡ ಹಾಗೂ ವನಿತೆಯರ ತಂಡ

ದೆಹಲಿ : ಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಖೋ-ಖೋ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತೀಯ ಮಹಿಳೆ ಹಾಗೂ ಪುರುಷರ ತಂಡ ನೇಪಾಳ ವಿರುದ್ಧ ಗೆಲುವು ಸಾಧಿಸುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿವೆ.

ಇಂದು ಮೊದಲು ನಡೆದ ಮಹಿಳೆಯರ ಫೈನಲ್‌ ಪಂದ್ಯದಲ್ಲಿ ನೇಪಾಳ ಮಹಿಳಾ ತಂಡವನ್ನು ಸೋಲಿಸುವ ಮೂಲಕ ಟ್ರೋಫಿ ಎತ್ತಿ ಹಿಡಿದಿತ್ತು.

https://x.com/airnewsalerts/status/1880975379906846844?ref_src=twsrc%5Etfw%7Ctwcamp%5Etweetembed%7Ctwterm%5E1880975379906846844%7Ctwgr%5Eec1d723942364511b3d4acb893c1223e2a0bc7e5%7Ctwcon%5Es1_c10&ref_url=https%3A%2F%2Fapi-news.dailyhunt.in%2F

ನಂತರ ನಡೆದ ಪುರುಷರ ಫೈನಲ್‌ ಪಂದ್ಯದಲ್ಲಿ ಭಾರತ ಗೆಲುವ ಸಾಧಿಸುವ ಮೂಲಕ ಟ್ರೋಫಿ ಎತ್ತಿ ಹಿಡಿದಿದೆ.ಪುರುಷರ ವಿಭಾಗದ ಫೈನಲ್‌ನಲ್ಲಿ ಟಾಸ್‌ ಗೆದ್ದ ನೇಪಾಳ ತಂಡ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಸ್ಟ್ರೈಕ್‌ ಮಾಡಿದ ಭಾರತ ಮೊದಲನೇ ಟರ್ನ್‌ನಲ್ಲಿ 26-0 ಅಂಕಗಳ ಮುನ್ನಡೆ ಗಳಿಸಿದರು.ಡಿಫೆಂಡರ್‌ಗಳ ತೀವ್ರ ಪ್ರತಿರೋಧದ ಬಲದಿಂದ ಭಾರತ ತಂಡ ಎರಡನೇ ಟರ್ನ್‌ನ ಕೊನೆಯಲ್ಲಿ 26-18 ಅಂಕಗಳಿಸಿತು. ಇದರಿಂದ ಈ ಟರ್ನ್‌ನಲ್ಲಿ ಭಾರತ 8 ಅಂಕಗಳ ಮುನ್ನಡೆ ಸಾಧಿಸಿತು.ಇದಾದ ನಂತರ 3 ನೇ ಟರ್ನ್‌ನಲ್ಲಿ ಭಾರತ 54 ಅಂಕಗಳನ್ನು ಗಳಿಸಿದರೆ, ನೇಪಾಳ ತಂಡ 18 ಅಂಕಗಳನ್ನು ಗಳಿಸಿ 36 ಅಂಕಗಳ ಹಿನ್ನಡೆ ಅನುಭವಿಸಿತು. ಅಂತಿಮವಾಗಿ ಭಾರತ ತಂಡವು ಏಕಪಕ್ಷೀಯವಾಗಿ ಪಂದ್ಯದಲ್ಲಿ ಗೆಲುವ ಸಾಧಿಸುವ ಮೂಲಕ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ವರದಿ: ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button