ವಿದೇಶ

ಪಾಕಿಸ್ತಾನ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಹಿಂದೂ ಮಹಿಳೆ..! 73 ವರ್ಷಗಳ ನಂತರದ ಸಾಧನೆ

ಇಸ್ಲಾಮಾಬಾದ್ ​​: ಪಾಕಿಸ್ತಾನದಲ್ಲಿ ನಡೆಯುವ ಸಿಎಸ್​ಎಸ್ ಪರೀಕ್ಷೆ ಸರ್ಕಾರದ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸುವ ವಿಚಾರದಲ್ಲಿ ಭಾರತದಲ್ಲಿ ನಡೆಯುವ ಸಿವಿಲ್​ ಸರ್ವಿಸ್​ ಪರೀಕ್ಷೆಗೆ ಸರಿಸಮಾನವಾಗಿದೆ. ​ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್​ ಮಾಡಿರುವ ಸನಾ ರಾಮಚಂದ್​​, ಪಾಕಿಸ್ತಾನದ ಸಿಂಧ್​ ಪ್ರಾಂತ್ಯದ ಶಿಕರ್​ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ ನಿವಾಸಿ.

73 ವರ್ಷಗಳ ನಂತರ ಹಿಂದೂ ಧರ್ಮೀಯ ಯುವತಿ ಸನಾ ರಾಮಚಂದ್ ಪಾಕಿಸ್ತಾನದಲ್ಲಿ ಪ್ರತಿಷ್ಠಿತ ಪರೀಕ್ಷೆ ಎಂದು ಪರಿಗಣಿಸಲಾದ ಕೇಂದ್ರಿಯ ಸುಪೀರಿಯರ್ ಸರ್ವೀಸಸ್ (ಸಿಎಸ್‌ಎಸ್) ಅನ್ನು ತೇರ್ಗಡೆ ಹೊಂದಿ ಗಮನ ಸೆಳೆದಿದ್ದಾರೆ. ಈ ಮೂಲಕ ಕಠಿಣ ಪರೀಕ್ಷೆ ಪಾಸ್ ಮಾಡಿರುವ ಪಾಕಿಸ್ತಾನದ ಮೊದಲ ಹಿಂದೂ ಯುವತಿ ಎಂಬ ಸಾಧನೆ ಮಾಡಿದರು.

ಸಿಎಸ್​​ಎಸ್​​ ಪರೀಕ್ಷೆಯಲ್ಲಿ ಪ್ರತಿವರ್ಷ ಶೇ 2ರಷ್ಟು ಅಭ್ಯರ್ಥಿಗಳು ಮಾತ್ರ ತೇರ್ಗಡೆಯಾಗುತ್ತಾರೆ. ಆದರೆ ಈ ವರ್ಷ ಹಿಂದೂ ಸಮುದಾಯದ ಯುವತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ.ಸನಾ ರಾಮಚಂದ್ ಎಂಬಿಬಿಎಸ್​ ಶಿಕ್ಷಣ ಮುಗಿಸಿದ್ದಾರೆ. 2016ರಲ್ಲಿ ಬೆನಜೀರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಶಿಕ್ಷಣ ಪಡೆದಿರುವ​ ಇವರು ಸಿಎಸ್​ ಎಸ್​ ಪರೀಕ್ಷೆಗೆ ಕಠಿಣ ತಯಾರಿ ನಡೆಸಿದ್ದರು.

Related Articles

Leave a Reply

Your email address will not be published. Required fields are marked *

Back to top button