ಕ್ರೈಂ
ಚಳ್ಳಕೆರೆ | ಮಂಗಳೂರು ಮೂಲದ ವ್ಯಕ್ತಿ ನೇಣಿಗೆ ಶರಣು
ಸುದ್ದಿಒನ್, ಚಳ್ಳಕೆರೆ, (ಸೆ.22) : ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಬಳಿರುವ ವೆಲ್ಡಿಂಗ್ ವರ್ಕ್ ಶಾಪ್ ಪಕ್ಕದ ರೂಮ್ ನಲ್ಲಿ ನೇಣು ಹಾಕಿಕೊಂಡು ವ್ಯಕ್ತಿಯೋರ್ವನು ಸಾವನ್ನಪ್ಪಿದ್ದಾನೆ.
ಮಂಗಳೂರು ಮೂಲದ ವ್ಯಕ್ತಿ (43) ನೇಣಿಗೆ ಶರಣಾಗಿದ್ದಾನೆ. ಕಳೆದ ಹತ್ತು ವರ್ಷಗಳ ಹಿಂದೆಯೇ ಮನೆಬಿಟ್ಟು ಬಂದು ಹೊಟ್ಟೆಪ್ಪನಹಳ್ಳಿ ಗ್ರಾಮದ ಬಳಿ ಬಂದು ವೆಲ್ಡಿಂಗ್ ವರ್ಕಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದನು.
ಆದರೆ ಸೆ.20 ರ ರಾತ್ರಿಯಲ್ಲಿ ವರ್ಕ್ ಶಾಪ್ ಪಕ್ಕದ ರೂಂ ನಲ್ಲಿ ಸಿಮೆಂಟ್ ಶೀಟ್ ನ ಮೇಲ್ಛಾವಣಿಯ ಕಬ್ಬಿಣದ ಪೈಪ್‌ಗೆ ಪ್ಲಾಸ್ಟಿಕ್ ವೈರ್‌ನಿಂದ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.