ಕ್ರೈಂ

ಗೆಳೆಯನೊಂದಿಗೆ ಪ್ರವಾಸ ಹೊಗಿದ್ದ ಯುವ ನಟಿ ಅಪಘಾತದಲ್ಲಿ ಸಾವು

ಗೆಳೆಯನೊಂದಿಗೆ ಜಾಲಿ ಟ್ರಿಪ್ ಹೊರಟಿದ್ದ ಯುವನಟಿ ಅಪಘಾತದಲ್ಲಿ ದಾರುಣ ಸಾವಿಗೀಡಾಗಿರುವ ಘಟನೆ ಮರಾಠಿ ಚಿತ್ರರಂಗವನ್ನು ಶೋಕಕ್ಕೆ ನೂಕಿದೆ.

ಮರಾಠಿ ನಟಿ ಈಶ್ವರ್ ದೇಶ್‌ಪಾಂಡೆ ಕಳೆದ ವಾರ ತಮ್ಮ ಬಾಯ್‌ಫ್ರೆಂಡ್ ಶುಭಂ ದಾದ್ಗೆ ಜೊತೆಗೆ ಗೋವಾಕ್ಕೆ ಜಾಲಿ ಟ್ರಿಪ್ ಹೋಗಿದ್ದರು. ಅಲ್ಲಿಂದ ಹಲವು ಕಡೆ ಕಾರಿನಲ್ಲಿಯೇ ಪ್ರವಾಸ ಮಾಡುತ್ತಿದ್ದರು, ಕಾರು ಗೋವಾದ ಬಾಗಾ ನದಿಗೆ ಬಿದ್ದ ಪರಿಣಾಮ ಈಶ್ವರಿ ಹಾಗೂ ಶುಭಂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ನೀರಿಗೆ ಬಿದ್ದಾಗ ಕಾರು ಸೆಂಟ್ರಲ್ ಲಾಕ್ ಆಗಿದ್ದ ಕಾರಣ ಇಬ್ಬರೂ ಸಹ ಕಾರಿನಿಂದ ಹೊರಗೆ ಬರಲು ಆಗದೆ ಅಲ್ಲಿಯೇ ಉಸಿರುಗಟ್ಟಿ ಅಸುನೀಗಿದ್ದಾರೆ. ಕಾರನ್ನು ನದಿಯಿಂದ ಮೇಲಕ್ಕೆತ್ತಲಾಗಿದ್ದು, ಮೃತ ದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

25 ವರ್ಷ ವಯಸ್ಸಿನ ನಟಿ ಈಶ್ವರಿ ನಟನೆ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ಮರಾಠಿ ಮತ್ತು ಹಿಂದಿ ಸಿನಿಮಾದ ಚಿತ್ರೀಕರಣವನ್ನು ಕಳೆದ ವಾರವಷ್ಟೆ ಅವರು ಮುಗಿಸಿದ್ದರು. ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ಬಾಯ್‌ಫ್ರೆಂಡ್ ಜೊತೆಗೆ ಗೋವಾಕ್ಕೆ ತೆರಳಿದ್ದರು. ಅಲ್ಲದೆ ತಮ್ಮ ಬಾಯ್‌ಫ್ರೆಂಡ್ ಶುಭಂ ಜೊತೆಗೆ ಮುಂದಿನ ತಿಂಗಳು ಎಂಗೇಜ್‌ಮೆಂಟ್ ಸಹ ಮಾಡಿಕೊಳ್ಳುವವರಿದ್ದರು ಈಶ್ವರಿ.ಈಶ್ವರಿ ನಟಿಸಿದ್ದ ಎರಡು ಸಿನಿಮಾಗಳು ಬಿಡುಗಡೆ ಆಗುವುದರಲ್ಲಿದ್ದವು, ಆದರೆ ಸಿನಿಮಾ ಬಿಡುಗಡೆಗೆ ಮುನ್ನವೇ ಈಶ್ವರಿ ಕಾಲವಾಗಿದ್ದಾರೆ. ಅವರ ಮೊದಲ ಮರಾಠಿ ಸಿನಿಮಾ ‘ಪ್ರೇಮಾಚೆ ಸೈಡ್ ಎಫೆಕ್ಟ್ಸ್’ ನಲ್ಲಿ ಈಶ್ವರಿ ಜೊತೆ ನಟಿಸಿರುವ ನಟ ಅಭಿಯನ್ ಬೇರ್ಡೆ ಸಾಮಾಜಿಕ ಜಾಲತಾಣದಲ್ಲಿ ನಟಿ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆದಿದ್ದು, ನಟಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button